alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಹುಲ್ ಗೆ ಕ್ಲೀನ್ ಚಿಟ್ ನೀಡಿದ್ದ ಪೊಲೀಸರು…!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚಿಸಿದ ಪ್ರಕರಣದ ಆರೋಪಿ ವಜ್ರದ ವ್ಯಾಪಾರಿ ಮೇಹುಲ್ ಚೋಕ್ಸಿಗೆ ಭಾರತದ ಪೊಲೀಸರಿಂದ ಕ್ಲೀನ್ ಚಿಟ್ ಸಿಕ್ಕ ನಂತರವೇ ನಮ್ಮ ದೇಶದ ಪೌರತ್ವ ನೀಡಲಾಗಿದೆ ಎಂದು ಅಂಟಿಗುವಾ ಸರ್ಕಾರ ತಿಳಿಸಿದೆ. 2017ರಲ್ಲಿ ಮೇಹುಲ್ ಗೆ ಅಂಟಿಗುವಾ ನಾಗರಿಕತ್ವ ನೀಡಲು ಭಾರತ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ ಎಂದು ಹೇಳಿದೆ.

ಮುಂಬೈನ ಪಾಸ್ ಪೋರ್ಟ್ ಕಚೇರಿಯಿಂದ ಪೊಲೀಸರು ಮೇಹುಲ್ ವಿರುದ್ಧ ದೂರು ದಾಖಲಾಗಿಲ್ಲ ಎಂಬ ನಿರಾಕ್ಷೇಪಣಾ ಪತ್ರ ನಮ್ಮ ಸರ್ಕಾರಕ್ಕೆ ಸಿಕ್ಕಿದೆ. ಅಲ್ಲದೆ ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಸೆಬಿ ಸಹ ಮೇಹುಲ್ ರನ್ನು ನಿರ್ದೋಷಿ ಎಂದು ತಿಳಿಸಿದೆ ಎಂಬ ಮಾಹಿತಿ ನೀಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸಾವಿರಾರು ಕೋಟಿ ರೂ. ವಂಚಿಸಿ ಪರಾರಿಯಾದ ಆರೋಪ ಎದುರಿಸುತ್ತಿರುವ ವಜ್ರ ವ್ಯಾಪಾರಿ ಮೇಹುಲ್ ಚೋಕ್ಸಿ, ಅಂಟಿಗುವಾದ ನಾಗರಿಕತ್ವಕ್ಕೆ ಅರ್ಜಿಯನ್ನು ಸಲ್ಲಿಸಿದ್ದು, ಬಳಿಕ ಪೌರತ್ವ ಪಡೆದಿದ್ದರು.

ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಆರೋಪಿ ಮೇಹುಲ್ ಚೋಕ್ಸಿಯನ್ನು ವಶಕ್ಕೆ ಪಡೆದುಕೊಳ್ಳಲು ಭಾರತ, ಆಂಟಿಗುವಾ ಮತ್ತು ಬರ್ಬುಡಾ ಸರ್ಕಾರವನ್ನು ಕೋರಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...