alex Certify
ಕನ್ನಡ ದುನಿಯಾ       Mobile App
       

Kannada Duniya

ಉದ್ಯಮಿಗಿದೆ ಇಂಥ ವಿಚಿತ್ರ ಹವ್ಯಾಸ

ಬರ್ಮಿಂಗ್ ಹ್ಯಾಮ್ ನ ಎಂಜಿನಿಯರ್ ಒಬ್ಬನಿಗೆ ಮಲಗುವಾಗ ಜೊತೆಗೆ ಫೋನ್ ಇರಲೇಬೇಕು. ಜೇಕ್ ಆರ್ಚರ್ ಕೆಲಸದ ನಿಮಿತ್ತ ವೇಲ್ಸ್ ಗೆ ಹೋಗಿದ್ದ, ಅಲ್ಲಿ ಹೋಟೆಲ್ ಕೋಣೆಯೊಂದರಲ್ಲಿ ಉಳಿದುಕೊಂಡಿದ್ದ. ಕೋಣೆಯಲ್ಲಿ ಅವನಿಗಾಗಿ ಹಾಕಿದ್ದ ಹಾಸಿಗೆ ಹತ್ತಿರ ಪ್ಲಗ್ ಸಾಕೆಟ್ ಇರಲಿಲ್ಲ.

ರಾತ್ರಿ ಫೋನ್ ಬ್ಯಾಟರಿ ಖಾಲಿಯಾದ್ರೆ, ಬೆಳಗ್ಗೆ ಅಲರಾಂ ಹೊಡೆದುಕೊಳ್ಳದಿದ್ರೆ ಅನ್ನೋ ಆತಂಕ ಜೇಕ್ ಗಿತ್ತು. ಕೊನೆಗೆ ಆತ ಬೆಡ್ ಪಕ್ಕದಲ್ಲೇ ಫೋನ್ ಚಾರ್ಜಿಂಗ್ ಗೆ ಹಾಕಲು ಹೋಟೆಲ್ ಕೋಣೆಯ ಇಂಟೀರಿಯರ್ ಬದಲಾಯಿಸಿದ್ದಾನೆ.

ಮಲಗುವಾಗ ಫೋನ್ ಜೊತೆಗಿಟ್ಟುಕೊಳ್ಳಬೇಕು ಅನ್ನೋ ಕಾರಣಕ್ಕೆ ಸಾಕಷ್ಟು ಸರ್ಕಸ್ ಮಾಡಿದ್ದಾನೆ. ಮಂಚವನ್ನು ತಂದು ಡ್ರೆಸಿಂಗ್ ಮಿರರ್ ಮುಂದೆ ಹಾಕಿದ್ದಾನೆ. ಇದರಿಂದಾಗಿ ಬಾತ್ ರೂಮಿಗೆ ಹೋಗಲು ಜಾಗವೇ ಇರಲಿಲ್ಲ. ಕೊನೆಗೆ ಜೇಕ್ ಅಲ್ಲಿಂದ ಹೊರಟುಹೋದ ಬಳಿಕ ಹೋಟೆಲ್ ಸಿಬ್ಬಂದಿ ಮಂಚವನ್ನು ಸ್ವಸ್ಥಾನಕ್ಕೆ ತಂದಿಟ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...