alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಮೈ ನಡುಗಿಸುವಂಥ ದೃಶ್ಯ

ಚೀನಾದ ಝುಝೌ ನಗರದಲ್ಲಿ ನಡೆದ ಭೀಕರ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಟವಶಾರ್ ಈ ದುರ್ಘಟನೆಯಲ್ಲಿ ಯಾರೂ ಸಾವನ್ನಪ್ಪಿಲ್ಲ. ಸೀಟ್ ಬೆಲ್ಟ್ ಪ್ರಯಾಣಿಕರನ್ನು ಬಚಾವ್ ಮಾಡಿದೆ. ಒಬ್ಬ ಪ್ರಯಾಣಿಕ ಮಾತ್ರ ಗಾಯಗೊಂಡಿದ್ದಾನೆ.

ಅಕ್ಟೋಬರ್ 1ರಂದು ಮಧ್ಯಾಹ್ನ 1.55ರ ಸುಮಾರು ಈ ಅಪಘಾತ ಸಂಭವಿಸಿದೆ. ಹೈವೇಯಲ್ಲಿ ಬಸ್ ವೇಗವಾಗಿ ಚಲಿಸ್ತಾ ಇತ್ತು. ಇದ್ದಕ್ಕಿದ್ದಂತೆ ಕಾರೊಂದು ಬಸ್ ನತ್ತ ನುಗ್ಗಿ ಬಂದಿದೆ. ಬಸ್ ಚಾಲಕ ವಾಹನವನ್ನು ಪಕ್ಕಕ್ಕೆ ಟರ್ನ್ ಮಾಡಿದ್ದಾನೆ.

ಆ ರಭಸಕ್ಕೆ ಸೀಟ್ ಬೆಲ್ಟ್ ಧರಿಸದೇ ಇದ್ದ ಪ್ರಯಾಣಿಕರೆಲ್ಲ ಅತ್ತಿಂದಿತ್ತ ಹಾರಿ ಬಿದ್ದಿದ್ದಾರೆ. ಸೀಟ್ ಬೆಲ್ಟ್ ಹಾಕಿಕೊಂಡಿದ್ದವರಿಗೆ ಯಾವುದೇ ಅಪಾಯವಾಗಿಲ್ಲ. ಪ್ರಯಾಣಿಕರು ಅಲ್ಲಾಡಿ ಬೀಳ್ತಾ ಇರೋ ದೃಶ್ಯ ಕೂಡ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ.

ಭಾರತದಲ್ಲಿ ಪ್ರತಿ ಗಂಟೆಗೆ ಅಪಘಾತದಲ್ಲಿ 17 ಜನರು ಬಲಿಯಾಗ್ತಿದ್ದಾರೆ. ಹಾಗಾಗಿ ಇದೇ ರೀತಿ ಬಸ್ ಗಳಲ್ಲೂ ಸೀಟ್ ಬೆಲ್ಟ್ ಅಳವಡಿಸಿದ್ರೆ ಅನಾಹುತವನ್ನು ಸ್ವಲ್ಪ ಮಟ್ಟಿಗಾದ್ರೂ ತಗ್ಗಿಸಬಹುದು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...