alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯನ್ನು ಪ್ರಯಾಣದುದ್ದಕ್ಕೂ ನಿಂದಿಸಿದ ಬಸ್ ಚಾಲಕ

ಇಂಗ್ಲೆಂಡ್ನಲ್ಲಿ ಮುಸ್ಲಿಂ ಮಹಿಳೆಯೊಬ್ಬರನ್ನು ಪ್ರಯಾಣದುದ್ದಕ್ಕೂ ಬಸ್ ಚಾಲಕ ನಿಂದಿಸಿದ ಘಟನೆ ನಡೆದಿದೆ. ಎಸ್ಟೋನ್ನಿಂದ ಬ್ರಿಸ್ಟೋನ್ ವರೆಗೆ ಎರಡು ತಿಂಗಳ ಮಗುವಿನೊಂದಿಗೆ ಬುರ್ಖಾಧಾರಿಯಾಗಿ ಯುವತಿಯೊಬ್ಬಳು ಫಸ್ಟ್ ಬಸ್ ನಲ್ಲಿ ಪ್ರಯಾಣ ಮಾಡಿದ್ದರು. 20 ವರ್ಷದ ಆ ಯುವತಿ ಬಸ್ ಹತ್ತುವ ಸಂದರ್ಭದಲ್ಲಿ ಬಸ್ ಡ್ರೈವರ್ ಬುರ್ಖಾ ತೆಗೆದು ಬಸ್ ಹತ್ತುವಂತೆ ಸೂಚಿಸಿದ. ಆದ್ರೆ ಇದಕ್ಕೆ ಆ ಯುವತಿ ಒಪ್ಪಿಕೊಳ್ಳಲಿಲ್ಲ. ತನ್ನ ಧಾರ್ಮಿಕ ನಂಬಿಕೆಗಳ ಪ್ರಕಾರ ತಾನು ಬುರ್ಖಾ ತೆಗೆಯೋಕೆ ಸಾಧ್ಯವಿಲ್ಲ ಅಂತ ಯುವತಿ ಪಟ್ಟು ಹಿಡಿದಳು.

ಆಗ ಬಸ್ ಚಾಲಕ ಆಕೆಗೆ ಪ್ರಪಂಚ ತುಂಬಾ ಕೆಟ್ಟದಾಗಿದೆ. ನೀನು ಆತ್ಮಹತ್ಯಾ ಬಾಂಬರ್ ಇರಬಹುದು. ಬಸ್ ಸ್ಫೋಟಿಸೋಕೆ ಇಲ್ಲಿ ಪ್ರಯಾಣ ನಡೆಸ್ತಿರಬಹುದು ಅಂತ ಆಕೆಯನ್ನ ದೂರಿದ್ದಾನೆ. ಅಷ್ಟೇ ಅಲ್ಲ ಪ್ರಯಾಣದ ಉದ್ದಕ್ಕೂ ಯುವತಿಯನ್ನ ಬುರ್ಖಾ ತೆಗೆಯುವಂತೆ ನಿಂದಿಸಿ ಮಾತನಾಡಿದ್ದಾನೆ. ಇದರಿಂದ ಆಕೆ ಪ್ರಯಾಣದ ನಂತರ ಫಸ್ಟ್ ಬಸ್ ಆಡಳಿತಾಧಿಕಾರಿಗಳಿಗೆ ಮತ್ತು ಪೊಲೀಸರಿಗೆ ದೂರು ನೀಡಿದ್ದಾಳೆ. ಇಂಗ್ಲೆಂಡ್ ಮಾಧ್ಯಮಗಳಲ್ಲೂ ಈ ಸುದ್ದಿ ಪ್ರಸಾರವಾಗಿದೆ.

ತನ್ನನ್ನು ಸಹಪ್ರಯಾಣಿಕರ ಮುಂದೆ ಬಸ್ ನ ಚಾಲಕ ಉಗ್ರರ ಹಾಗೆ ಬಿಂಬಿಸಿದ . ಸಹ ಪ್ರಯಾಣಿಕರಿಗೂ ಯುವತಿಯ ಬಗ್ಗೆ ಎಚ್ಚರದಿಂದ ಇರುವಂತೆ ಸೂಚಿಸಿದ. ಇದರಿಂದ ತನಗೆ ಅವಮಾನವಾಗಿದೆ ಅಂತ ಯುವತಿ ನೊಂದುಕೊಂಡಿದ್ದಾಳೆ. ಬಸ್ನಲ್ಲಿದ್ದ ಸಹ ಪ್ರಯಾಣಿಕರ ಪೈಕಿ ಕೆಲವರು ಯುವತಿಯ ಪರವಾಗಿ ಬಸ್ನಲ್ಲಿ ಧ್ವನಿ ಎತ್ತಿದ್ದರು. ಅದಕ್ಕೆ ಆತ ಪ್ರಪಂಚ ತುಂಬಾ ಕೆಟ್ಟದಾಗಿದೆ ಅಂತ ಹೇಳಿದನಂತೆ.

ಚಾಲಕ ಮಾಡಿದ ಅವಮಾನಕ್ಕೆ ಫಸ್ಟ್ ಬಸ್ ಸಂಸ್ಥೆ ಯುವತಿಯ ಕ್ಷಮೆ ಕೇಳಿದೆ. ಚಾಲಕನ ವೈಯಕ್ತಿಕ ಅಭಿಪ್ರಾಯವನ್ನು ಆತ ಎಲ್ಲರ ಮುಂದೆ ವ್ಯಕ್ತಪಡಿಸಿದ್ದು, ತಪ್ಪು ಅಂತ ಫಸ್ಟ್ ಬಸ್ನ ವಕ್ತಾರರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...