alex Certify
ಕನ್ನಡ ದುನಿಯಾ       Mobile App
       

Kannada Duniya

ವೆಂಟಿಲೇಟರ್ ನಲ್ಲಿ ನೇತಾಡ್ತಿದ್ದ ಕಳ್ಳ…!

ಕಳ್ಳತನ ಮಾಡಲು ರೆಸ್ಟೋರೆಂಟ್ ಒಂದಕ್ಕೆ ನುಗ್ಗಿದ ಕಳ್ಳನೊಬ್ಬ ಇನ್ನಿಲ್ಲದ ಫಜೀತಿ ಅನುಭವಿಸಿದ್ದಾನೆ. ಬರ್ಮಿಂಗ್ ಹ್ಯಾಂ ನಲ್ಲಿ ಈ ಘಟನೆ ನಡೆದಿದ್ದು, ವೆಂಟಿಲೇಟರ್ ಮೂಲಕ ಒಳ ಪ್ರವೇಶಿಸಲು ಯತ್ನಿಸಿದ ಕಳ್ಳ ಮಧ್ಯದಲ್ಲೇ ಸಿಲುಕಿಕೊಂಡಿದ್ದು, ಕೊನೆಗೂ ಸುರಕ್ಷಿತವಾಗಿ ಕೆಳಗಿಳಿಸಲು ಯಶಸ್ವಿಯಾದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಧ್ಯ ರಾತ್ರಿ ವೆಂಟಿಲೇಟರ್ ಮೂಲಕ ಒಳ ಪ್ರವೇಶಿಸಲು ಯತ್ನಿಸಿದ ಕಳ್ಳ ತನ್ನ ಪ್ರಯತ್ನದಲ್ಲಿ ಸಫಲನಾಗದೆ ಅರ್ಧದಲ್ಲಿಯೇ ಸಿಕ್ಕಿ ಬಿದ್ದಿದ್ದಾನೆ. ಆತನ ಕಾಲು ಹೊರಗಿದ್ದು, ಮಿಕ್ಕ ದೇಹ ರೆಸ್ಟೋರೆಂಟ್ ಒಳಗಿದೆ. ಇದೇ ಸ್ಥಿತಿಯಲ್ಲಿ ಆತ ಸುಮಾರು 7 ಗಂಟೆಗಳ ಕಾಲ ಪರದಾಡಿದ್ದಾನೆ.

ಕೊನೆಗೆ ಬೆಳಗಿನ ಜಾವ ದಾರಿಹೋಕರೊಬ್ಬರು ಸಹಾಯಕ್ಕಾಗಿ ಆತ ಮೊರೆಯಿಡುತ್ತಿದ್ದುದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕದಳದ ಸಿಬ್ಬಂದಿ ಸಹಾಯದಿಂದ ಏಣಿ ಬಳಸಿ ಆತನನ್ನು ಸುರಕ್ಷಿತವಾಗಿ ಪಾರು ಮಾಡಿದ್ದಾರೆ. ಕಳ್ಳತನಕ್ಕೆತ್ನಿಸಿದ ಆರೋಪದ ಮೇಲೆ ಕಳ್ಳನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವೆಸ್ಟ್ ಮಿಡ್ ಲ್ಯಾಂಡ್ ಪೊಲೀಸರು ವೆಂಟಿಲೇಟರ್ ನಲ್ಲಿ ನೇತಾಡುತ್ತಿದ್ದ ಕಳ್ಳನ ಫೋಟೋವನ್ನು ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಹಾಕಿದ್ದು, ಸಾರ್ವಜನಿಕರು ತಮಾಷೆಯ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...