alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ಕದಿಯೋಕೆ ಬಂದವನು ಅಡುಗೆ ಶುರು ಮಾಡಿದ್ದ

burglar-makes-dinner_650x400_81495944566

ಅಮೆರಿಕದ ಮಿಸಿಸಿಪ್ಪಿಯಲ್ಲಿರೋ ರೆಸ್ಟೋರೆಂಟ್ ಒಂದಕ್ಕೆ ದುಷ್ಕರ್ಮಿಯೊಬ್ಬ ಕನ್ನ ಹಾಕಿದ್ದಾನೆ. ಇ&ಎಲ್ ಬಾರ್ಬೆಕ್ಯು ರೆಸ್ಟೋರೆಂಟ್ ನ ಛಾವಣಿಯನ್ನೇ ಒಡೆದು ಕಳ್ಳ ಒಳನುಗ್ಗಿದ್ದ. ನಂತರ ಹಣಕ್ಕಾಗಿ ಎಲ್ಲಾ ಕಡೆ ಹುಡುಕಾಡಿದ್ದಾನೆ.

ಅಷ್ಟರಲ್ಲಿ ಕಳ್ಳನಿಗೆ ಸುಸ್ತಾಗಿತ್ತು, ಇನ್ನಿಲ್ಲದ ಹಸಿವು ಕಾಣಿಸಿಕೊಂಡಿತ್ತು. ಹಣದ ಹುಡುಕಾಟವನ್ನು ಅಷ್ಟಕ್ಕೇ ನಿಲ್ಲಿಸಿ ದುಷ್ಕರ್ಮಿ ಅಡುಗೆ ಮಾಡಲು ಆರಂಭಿಸಿದ್ದಾನೆ. ನಾಲ್ಕು ಸ್ಯಾಂಡ್ ವಿಚ್, ಫ್ರೈಸ್ ಮಾಡ್ಕೊಂಡು ತಿಂದಿದ್ದಾನೆ. ಅಲ್ಲೇ ಇದ್ದ ನಾಲ್ಕಾರು ಬಾಟಲಿ ಸೋಡಾ ಕುಡಿದು ಬಾಯಾರಿಕೆ ತೀರಿಸಿಕೊಂಡಿದ್ದಾನೆ.

ಕಳ್ಳನಿಗೆ ಹೊಟ್ಟೆಯೇನೋ ತುಂಬಿತ್ತು, ಆದ್ರೆ ಜೇಬು ಮಾತ್ರ ತುಂಬಿರ್ಲಿಲ್ಲ. ಯಾಕಂದ್ರೆ ರೆಸ್ಟೋರೆಂಟ್ ನಲ್ಲಿ ಕಳ್ಳನಿಗೆ ಹಣ ಸಿಕ್ಕಿಲ್ಲ. ಕೊನೆಗೆ ಛಾವಣಿ ಮೂಲಕವೇ ಆತ ಹೊರಬಿದ್ದು ಹೋಗಿದ್ದಾನೆ. ಕಳ್ಳನ ಈ ಕೃತ್ಯವೆಲ್ಲ ರೆಸ್ಟೋರೆಂಟ್ ನಲ್ಲಿದ್ದ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ಜನರು ಅವನೊಬ್ಬ ಮೂರ್ಖ ಕಳ್ಳ ಅಂತಾ ಲೇವಡಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...