alex Certify
ಕನ್ನಡ ದುನಿಯಾ       Mobile App
       

Kannada Duniya

ಸತ್ತ ಮೇಲೆ ಚುನಾವಣೆ ಗೆದ್ದ ವೇಶ್ಯಾವಾಟಿಕೆ ಅಡ್ಡೆ ಮಾಲೀಕ

ಕಳೆದ ತಿಂಗಳಷ್ಟೇ ಮೃತಪಟ್ಟ ಅಮೆರಿಕದ ಪ್ರಸಿದ್ಧ ಪಿಂಪ್ ಒಬ್ಬ ಇದೀಗ ನೇವಡಾ ಸ್ಟೇಟ್ ಶಾಸಕಾಂಗ ಸಭೆಗೆ ನಡೆದ ಚುನಾವಣೆಯಲ್ಲಿ 36ನೇ ಕ್ಷೇತ್ರದಲ್ಲಿ ಗೆದ್ದಿದ್ದಾನೆ. ವೇಶ್ಯಾಗೃಹಗಳ ಮಾಲೀಕನಾಗಿದ್ದ 72ರ ಹರೆಯದ ಡೆನ್ನಿಸ್ ಹೋಫ್ ಎಂಬಾತನಿಗೇ ಈ ವಿಜಯ ಒಲಿದಿರುವುದು.

ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿದ್ದ ಆತ ಡೆಮಾಕ್ರೆಟಿಕ್ ಪಕ್ಷದ ಶಿಕ್ಷಣ ತಜ್ಞೆ ಲಿಸಿಯಾ ರೋಮನೋವ್ ವಿರುದ್ಧ 68% ಮತ ಪಡೆದಿದ್ದಾನೆ. ಇದೀಗ ಮೃತಪಟ್ಟ ಆತನ ಸ್ಥಾನಕ್ಕೆ ಆತನದ್ದೇ ಪಕ್ಷದಿಂದ ಬೇರೆ ಸ್ಪರ್ಧಿಯನ್ನು ಬದಲಿಯಾಗಿ ನೇಮಿಸಲಾಗುತ್ತದೆ ಎಂದು ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದಾರೆ.

ಇವನ್ನೆಲ್ಲಾ ಪಕ್ಕಕ್ಕಿಟ್ಟು ನೋಡಿದರೆ ಡೆನ್ನಿಸ್ ಹೋಫ್ ವರ್ಣರಂಜಿತ ವ್ಯಕ್ತಿತ್ವವುಳ್ಳಾತ. ನೇವಾಡಾದ ಪರ್ಹಾಂಪ್ ನಿವಾಸಿಯಾದ ಈತ ತನ್ನ ಮನೆಯ ಪಕ್ಕದಲ್ಲೇ ಐದು ವೇಶ್ಯಾಗೃಹ ಹೊಂದಿದ್ದ. ವೇಶ್ಯಾವಾಟಿಕೆ ಕಡೆಗೆ ಗ್ರಾಹಕರನ್ನು ಸೆಳೆಯುವುದು ಹೇಗೆ ಎಂಬ ಬಗ್ಗೆ ಪುಸ್ತಕವನ್ನೇ ಬರೆದಿದ್ದ ಆತ ರಾಜಕೀಯದಲ್ಲೂ ಕಾಣಿಸಿಕೊಂಡಿದ್ದ. ತನ್ನ ರಾಜಕೀಯ ಬೆಳವಣಿಗೆಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹೋಲಿಸಿಕೊಳ್ಳುತ್ತಿದ್ದ ಹೋಫ್ `ಪರ್ಹಾಂಪ್ ನ ಟ್ರಂಪ್’ ಎಂದೇ ಹೇಳಿಕೊಳ್ಳುತ್ತಿದ್ದ.

ಕಳೆದ ತಿಂಗಳು ತನ್ನ 72ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದ ಹಾಫ್ ನನ್ನು ಆತನ ಗೆಳೆಯರು ಮಾರ್ನಿಂಗ್ ವಾಕ್ ಗೆಂದು ಕರೆಯಲು ಹೋದಾಗ ಆತ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು. ನೇವಡಾದಲ್ಲಿ ಅಪಾರ ಆಸ್ತಿ ಹೊಂದಿರುವ ಆತನ ಅಸಹಜ ಸಾವಿಗೆ ಕಾರಣ ಏನು ಎಂದು ಪೊಲೀಸರು ಹುಡುಕುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...