alex Certify
ಕನ್ನಡ ದುನಿಯಾ       Mobile App
       

Kannada Duniya

8 ಡಾಲರ್ ಆಭರಣ ಹರಾಜಾಗಿದ್ದೆಷ್ಟಕ್ಕೆ ಗೊತ್ತಾ..?

ನ್ಯೂಯಾರ್ಕ್ ನ ಗ್ಯಾರೇಜ್ ಸೇಲ್ ಒಂದರಲ್ಲಿ ಕೇವಲ 8 ಡಾಲರ್ ಕೊಟ್ಟು ಖರೀದಿಸಿದ್ದ 20ನೇ ಶತಮಾನದ ಆಭರಣ 26,000 ಡಾಲರ್ ಗೆ ಹರಾಜಾಗಿದೆ. ಈ ಆಭರಣದಲ್ಲಿ ಅಮೂಲ್ಯವಾದ ವಜ್ರ, ರೂಬಿ ಹಾಗೂ ಪಚ್ಚೆಯನ್ನು ಅಳವಡಿಸಲಾಗಿತ್ತು.

ಈ ಆಭರಣದಲ್ಲಿರೋದು ಹಳೆಯ ಯುರೋಪಿಯನ್ ಕಟ್ ವಜ್ರ. 1.39 ಕ್ಯಾರೆಟ್ ತೂಕದ ವಜ್ರ ಇದರಲ್ಲಿದೆ. ಕೊಲಂಬಿಯಾ ಮೂಲದ ಪಚ್ಚೆಯ ತೂಕ 1.50 ಕ್ಯಾರೆಟ್. 0.60 ಕ್ಯಾರೆಟ್ ತೂಕದ, ಮೊಟ್ಟೆಯಾಕಾರದ ರೂಬಿಯಿಂದ ಅಲಂಕರಿಸಲಾಗಿದೆ.

ಈ ಆಭರಣವನ್ನು ಕೊಂಡಿದ್ದ ಮಾಲೀಕ ಅದನ್ನು ತನ್ನ ಮಗಳಿಗೆ ಚರ್ಚ್ ನಲ್ಲಿ ಧರಿಸಲು ಕೊಟ್ಟಿದ್ದ. ಅದನ್ನು ಬ್ಯಾಗ್ ನಲ್ಲಿಟ್ಟುಕೊಂಡಿದ್ದ ಆಕೆ ಮರೆತೇಬಿಟ್ಟಿದ್ದಳು. ಕೊನೆಗೆ ಎಷ್ಟೋ ದಿನಗಳ ಬಳಿಕ ನೆನಪಾಗಿ ಅದನ್ನು ಆಭರಣ ತಯಾರಕರ ಬಳಿ ಪರೀಕ್ಷಿಸಿದ್ದಳು.

ಗೆಮೊಲೊಜಿಕಲ್ ಇನ್ ಸ್ಟಿಟ್ಯೂಟ್ ಆಫ್ ಅಮೆರಿಕದಲ್ಲೂ ಆಭರಣವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿರುವ ರೂಬಿ, ಪಚ್ಚೆ ಹಾಗೂ ವಜ್ರ ಅತ್ಯಮೂಲ್ಯವಾದದ್ದು ಅಂತಾ ಸಂಶೋಧಕರು ತಿಳಿಸಿದ್ದಾರೆ. ಸೆಪ್ಟೆಂಬರ್ 19ರಂದು ಆಭರಣವನ್ನು ಹರಾಜು ಹಾಕಲಾಗಿದ್ದು, 26,250 ಡಾಲರ್ ಗೆ ಅದು ಮಾರಾಟವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...