alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸಿಗೆಯಲ್ಲಿ ಮೂತ್ರ ಮಾಡಿದ ಪುಟಾಣಿಗೆ ಇದೆಂಥಾ ಶಿಕ್ಷೆ?

bed-wet

ಫ್ರಾನ್ಸ್ ನಲ್ಲಿ ಹಾಸಿಗೆಯಲ್ಲಿ ಮೂತ್ರ ಮಾಡಿದ್ದಾನೆ ಅನ್ನೋ ಕಾರಣಕ್ಕೆ 5 ವರ್ಷದ ಪುಟ್ಟ ಬಾಲಕನನ್ನು ಮಲತಂದೆಯೇ ಹೊಡೆದು ಕೊಂದಿದ್ದಾನೆ. ಮನೆಯಿಂದ 200 ಮೀಟರ್ ದೂರದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಮಲತಂದೆ ಥಳಿಸಿದ ರಭಸಕ್ಕೆ ಮಗುವಿನ ಮೂಗು ಮುರಿದಿತ್ತು. ತಲೆಯಲ್ಲೆಲ್ಲ ಗಾಯಗಳಾಗಿದ್ದವು.

ಮಗು ಪ್ರಜ್ಞೆತಪ್ಪಿ ಬಿದ್ದಿದೆ ಅಂತಾ ಪೋಷಕರು ಮೊದಲು ಆ್ಯಂಬ್ಯುಲೆನ್ಸ್ ಗೆ ಕರೆಮಾಡಿದ್ದರು. ಅನುಮಾನ ಬಾರದಿರಲಿ ಅಂತಾ ಪೊಲೀಸರಿಗೂ ಕರೆ ಮಾಡಿ ವಿಷಯ ತಿಳಿಸಿದ್ದರು. ಮಗುವಿನ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ ಪೊಲೀಸರು ಪೋಷಕರನ್ನು ವಿಚಾರಣೆ ಮಾಡಿದಾಗ ಅಸಲಿ ವಿಷಯ ಬಯಲಾಗಿದೆ.

ಹಾಸಿಗೆಯಲ್ಲಿ ಮೂತ್ರ ಮಾಡಿದ್ದಾನೆ ಅಂತಾ ಕೋಪದಲ್ಲಿ ಮಲತಂದೆಯೇ ಮನಬಂದಂತೆ ಥಳಿಸಿ ಮಗುವನ್ನು ಕೊಂದು ಹಾಕಿರೋದು ಗೊತ್ತಾಗಿದೆ. ಮೃತ ಮಗುವಿನ ಪೋಷಕರನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...