alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟಿಷ್ ಗಾಯಕಿ ಕಂಠದಲ್ಲಿ ‘ಆಜ್ ಜಾನೆ ಕಿ ಜಿದ್ ನಾ ಕರೋ’

ನಮ್ಮ ಭಾರತೀಯ ಹಾಡುಗಳು ಕೇಳಲು ಕಿವಿಗೆ ತುಂಬಾ ಇಂಪಾಗಿರುತ್ತದೆ. ಆದರೆ ಕೆಲವರು ಅದಕ್ಕೆ ತಮ್ಮದೆ ಆದ ಬೇರೆ ಶೈಲಿಯ ರಾಗವನ್ನು ಸೇರಿಸುವುದರ ಮೂಲಕ ಆ ಹಾಡಿನ ಸೊಗಸನ್ನೇ ಹಾಳು ಮಾಡುತ್ತಾರೆ. ಆದರೆ ಇನ್ನು ಕೆಲವರು ಆ ಹಾಡಿನ ಜೊತೆಗೆ ತಮ್ಮ ಪ್ರಯತ್ನವನ್ನು ಸೇರಿಸುವುದರ ಮೂಲಕ ಹಾಡಿನ ಇಂಪನ್ನು ಇನ್ನಷ್ಟು ಹೆಚ್ಚಿಸುತ್ತಾರೆ.

ಅದಕ್ಕೆ ಒಂದು ಉದಾಹರಣೆ ಎಂದರೆ ನವೆಂಬರ್ 2017 ರಲ್ಲಿ ಲಾಹೋರ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬ್ರಿಟಿಷ್ ಗಾಯಕಿ ತಾನ್ಯ ‘ಆಜ್ ಜಾನೆ ಕಿ ಜಿದ್ ನಾ ಕರೋ’ ಹಾಡನ್ನು ಹಾಡುವುದರ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಈ ವಿಡಿಯೋ ಈಗ ಸಕತ್ ವೈರಲ್ ಆಗಿದೆ.

ಫಯಾಜ್ ಹಶ್ಮಿ ಬರೆದ ಈ ಹಾಡನ್ನು ಖಾನಂ ಅವರು ತಮ್ಮ ಕಂಠದಿಂದ ಸುಮಧುರವಾಗಿ ಹಾಡಿದ್ದರು. ಈಗ ಈ ಹಾಡನ್ನು ತಾನ್ಯ ಹಾಡುವುದರ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. ಇವರ ಹಾಡಿನ ಮೋಡಿಗೆ ಅನುಭವಿ ಕಲಾವಿದರು ಹಾಗೂ ಗಾಯಕರು ಭೇಷ್ ಎಂದಿದ್ದಾರೆ.

ಲಂಡನ್ ನಲ್ಲಿ ಜನಿಸಿದ ಗಾಯಕಿ ತಾನ್ಯ ಉತ್ತರ ಭಾರತದ ಭಾಷೆ ಹಾಗೂ ಸಂಗೀತಕ್ಕೆ ತಮ್ಮ ಹೆಚ್ಚು ಸಮಯವನ್ನು ಮೀಸಲಿಟ್ಟಿದ್ದಾರೆ. ಇವರು ಈ ಹಾಡನ್ನು ಹಾಡುವುದರ ಮೂಲಕ ಇವರೊಬ್ಬ ಪ್ರತಿಭಾನ್ವಿತ ಸಂಗೀತಗಾರ್ತಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...