alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟನ್ ನಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಜಫ್ತಿ

ಲಂಡನ್: ಬ್ರಿಟನ್ ನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ ಆಸ್ತಿ, ಪಾಸ್ತಿಯನ್ನು ಜಫ್ತಿ ಮಾಡಲಾಗಿದ್ದು, ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ.

2015 ರಲ್ಲಿ ದಾವೂದ್ ಆಸ್ತಿಯ ಕುರಿತಾಗಿ ಭಾರತ ಮಾಹಿತಿ ನೀಡಿತ್ತು. ಬ್ರಿಟನ್ ನಲ್ಲಿ ದಾವೂದ್ ಗೆ ಸೇರಿದ 6.7 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಜಫ್ತಿ ಮಾಡಲಾಗಿದೆ.

ಭಾರತ ಮತ್ತು ದುಬೈ ಬಳಿಕ ಲಂಡನ್ ನಲ್ಲಿ ದಾವೂದ್ ಆಸ್ತಿ ಜಫ್ತಿ ಮಾಡಲಾಗಿದೆ. ರೆಸ್ಟೊರೆಂಟ್ ಸೇರಿ ಹಲವು ಕಟ್ಟಡಗಳನ್ನು ಆತ ಹೊಂದಿದ್ದಾನೆ.

ಡಿ ಕಂಪನಿ ಮೂಲಕ ದಾವೂದ್ ಜಗತ್ತಿನ 2 ನೇ ಅತಿದೊಡ್ಡ ಶ್ರೀಮಂತ ಕ್ರಿಮಿನಲ್ ಆಗಿದ್ದಾನೆ. 5 ಖಂಡಗಳ 16 ದೇಶಗಳಲ್ಲಿ ಆತನ ಸಾಮ್ರಾಜ್ಯವಿದೆ.

ನಕಲಿ ನೋಟು, ಗ್ಯಾಂಬ್ಲಿಂಗ್, ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ ಕಳ್ಳ ಸಾಗಣೆ, ಪೈರಸಿ ಹೀಗೆ ಹಲವು ಅಕ್ರಮ ವ್ಯವಹಾರಗಳನ್ನು ಆತ ಹೊಂದಿದ್ದು, ಈ ಮೂಲಕ ಮೋಸ್ಟ್ ವಾಂಟೆಡ್ ಆಗಿದ್ದಾನೆ. ಆತನಿಗೆ 21 ಹೆಸರುಗಳಿವೆ ಎಂದು ಪಟ್ಟಿ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...