alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರಿಟನ್ ನಿಂದ ಹಳೆ ನೋಟು ಕಳಿಸಿಕೊಟ್ಟ ಭಾರತೀಯರು

indians

ಬ್ರಿಟನ್ ನಲ್ಲಿರುವ ಭಾರತೀಯರೆಲ್ಲ ಹಳೆ ನೋಟುಗಳ ಬದಲಾವಣೆ ಮತ್ತು ಡೆಪಾಸಿಟ್ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡ್ತಿದ್ದಾರೆ.

ಯಾಕಂದ್ರೆ ಅಷ್ಟರೊಳಗೆ ಭಾರತಕ್ಕೆ ಬರುವ ಸ್ನೇಹಿತರು ಅಥವಾ ಸಂಬಂಧಿಕರ ಬಳಿಯಾದ್ರೂ ಹಳೆ ನೋಟುಗಳನ್ನು ಕೊಟ್ಟು ಕಳಿಸಬಹುದು ಅನ್ನೋದು ಅವರ ಲೆಕ್ಕಾಚಾರ. 2011 ರ ಜನಗಣತಿ ಪ್ರಕಾರ ಇಂಗ್ಲೆಂಡ್ ಹಾಗೂ ವೇಲ್ಸ್ ನಲ್ಲಿ ಶೇ.2.5ರಷ್ಟು ಭಾರತೀಯರಿದ್ದಾರೆ. ಎಲ್ಲರ ಬಳಿಯೂ ಸ್ವಲ್ಪವಾದ್ರೂ ಭಾರತೀಯ ಕರೆನ್ಸಿ ಇದ್ದೇ ಇದೆ, ಅವುಗಳನ್ನು ಭಾರತದಲ್ಲಿ ಮಾತ್ರ ಬದಲಾವಣೆ ಮಾಡಿಕೊಳ್ಳಲು ಸಾಧ್ಯ.

ಸರ್ಕಾರದ ದಿಢೀರ್ ನಿರ್ಧಾರದಿಂದ ಬ್ರಿಟನ್ ನಲ್ಲಿರೋ ಸುಮಾರು 1 ಮಿಲಿಯನ್ ಭಾರತೀಯರು ಗೊಂದಲಕ್ಕೆ ಸಿಲುಕಿದ್ದಾರೆ. ಅಲ್ಪ ಸ್ವಲ್ಪ ಹಣ ಬದಲಾವಣೆಗಾಗಿ ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದು ಹೋಗುವುದು ಅಸಾಧ್ಯ. ಹಾಗಾಗಿ ಕೆಲವರು ಭಾರತಕ್ಕೆ ತೆರಳುತ್ತಿರುವ ಸ್ನೇಹಿತರು, ಸಂಬಂಧಿಕರ ಬಳಿ ಹಳೆ ನೋಟುಗಳನ್ನು ಕೊಟ್ಟು ಕಳುಹಿಸುತ್ತಿದ್ದಾರೆ. ಬ್ರಿಟನ್ ನಲ್ಲೇ ನೋಟು ಬದಲಾವಣೆಗೆ ವ್ಯವಸ್ಥೆ ಮಾಡುವಂತೆ ಬ್ಯಾಂಕ್ ಆಫ್ ಇಂಗ್ಲೆಂಡ್ ಗವರ್ನರ್ ಮಾರ್ಕ್ ಕಾರ್ನಿ ಅವರಿಗೆ ಪತ್ರ ಬರೆಯಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...