alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಹಾತಾಯಿ ಕತೆ ಗೊತ್ತಾದ್ರೆ ನೀವು ಬೆರಗಾಗ್ತೀರಿ…!

ಆಕೆಯ ಹೆಸರು ಟ್ರೆಸ್ಸಿ ಬ್ರಿಟನ್. ನೆಲೆಸಿರೋದು ಲಂಡನ್ನಲ್ಲೇ. ಜೀವನದಲ್ಲಿ ಆಕೆ ಹಾಫ್ ಸೆಂಚುರಿ ಬಾರಿಸಿದ್ದಾಳೆ. ಅಂದ್ರೆ ಆಕೆಯ ವಯಸ್ಸು 50. ಆದ್ರೆ ನೋಡೋಕೆ ಮಾತ್ರ ಇನ್ನು ಯಂಗ್ ಅಂಡ್ ಎನರ್ಜೆಟಿಕ್. ಈಗಾಗ್ಲೇ ಎಂಟು ಮಂದಿ ಮೊಮ್ಮಕ್ಕಳನ್ನು ಹೊಂದಿರೋ ಟ್ರೆಸ್ಸಿ ಸದ್ಯ ನಾಲ್ಕು ಮಕ್ಕಳನ್ನ ಹೊಟ್ಟೆಯಲ್ಲಿಟ್ಟುಕೊಂಡಿದ್ದಾರೆ. ಇನ್ನು ಕೆಲವೇ ತಿಂಗಳಿನಲ್ಲಿ ಆಕೆ 4 ಮಕ್ಕಳಿಗೆ ತಾಯಿಯಾಗಲಿದ್ದಾಳೆ ಅಂತ ಹೇಳಲಾಗ್ತಿದೆ. ಅದರಲ್ಲಿ ಎರಡು ಮಕ್ಕಳು ಅವಳಿ ಜವಳಿ ಆಗಬಹುದು ಅಂತ ವೈದ್ಯರು ಹೇಳಿದ್ದಾರೆ.

ಟ್ರೆಸ್ಸಿ ಐವಿಎಫ್ ವೈದ್ಯಕೀಯ ಪ್ರಯೋಗದ ಮೂಲಕ ಈಗ ಮತ್ತೆ ಮಕ್ಕಳನ್ನ ಹಡೆಯಲು ಸಿದ್ಧರಾಗಿದ್ದಾರೆ. ಸದ್ಯ ಅವರು ಗರ್ಭಿಣಿ. ವಯಸ್ಸು 50 ಆಗಿರಬಹುದು. ಆದ್ರೆ ನನಗೆ ವಯಸ್ಸಾಯ್ತು ಅಂತ ನಾನು ಭಾವಿಸಿಲ್ಲ. ಪ್ರತಿ ವರ್ಷವೂ ನಾನು ಒಂದು ಮಗು ಹೆರಬೇಕು. ಇಂಗ್ಲೆಂಡ್ ನಲ್ಲಿ ಯಾರೂ ನನ್ನ ದಾಖಲೆಯನ್ನ ಅಳಿಸೋಕೆ ಸಾಧ್ಯವಾಗಬಾರದು ಅಂತಾರೆ ಟ್ರೆಸ್ಸಿ.

2003ರಲ್ಲಿ ಟ್ರೆಸ್ಸಿ ಮೊದಲ ಪತಿಯಿಂದ ವಿಚ್ಚೇದನ ಪಡೆದಾಗ ಅವರಿಗೆ ಮೂವರು ಮಕ್ಕಳಿದ್ದರು. ಈಗ ಅವರೆಲ್ಲರ ವಯಸ್ಸು 30. 2005ರಲ್ಲಿ ಟ್ರೆಸ್ಸಿ ಸ್ಟೀಫನ್ ಎಂಬುವವರನ್ನ ಮದುವೆಯಾಗ್ತಾರೆ. ಈ ದಂಪತಿಯ ಮೊದಲ ಮಗುವಿನ ಬೆಳವಣಿಗೆ ಸರಿ ಇಲ್ಲದ ಕಾರಣ ಅಬಾರ್ಷನ್ ಮಾಡಿಸಿದ ದಂಪತಿ ಈಗ ಒಂದೇ ಸಮಯದಲ್ಲಿ ಮನೆಗೆ ನಾಲ್ಕು ಮಕ್ಕಳನ್ನ ಸ್ವಾಗತಿಸುವ ನಿರೀಕ್ಷೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...