alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲು ಸೇರಲು ಕಾರಣವಾಯ್ತು ಪೇನ್ ಕಿಲ್ಲರ್ ಮಾತ್ರೆ..!

ಈಜಿಪ್ಟ್ ನಲ್ಲಿ ನೋವು ನಿರೋಧಕ ಮಾತ್ರೆಯನ್ನಿಟ್ಟುಕೊಂಡಿದ್ದ ಮಹಿಳೆಯೊಬ್ಬಳು ಜೈಲು ಸೇರಿದ್ದಾಳೆ. ಆಕೆಗೆ 25 ವರ್ಷಗಳ ಕಾಲ ಕಠಿಣ ಶಿಕ್ಷೆ ಅಥವಾ ಗಲ್ಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಬ್ರಿಟನ್ ನಲ್ಲಿ ವಾಸವಾಗಿರುವ 33 ವರ್ಷದ ಲಾರಾ ಈಜಿಪ್ಟ್ ನಲ್ಲಿ ಬಂಧಿಯಾಗಿದ್ದಾಳೆ.

ವಾಸ್ತವವಾಗಿ ಲಾರಾ ಪತಿಯನ್ನು ಭೇಟಿಯಾಗಲು ಎರಡು ವರ್ಷಕ್ಕೆ ನಾಲ್ಕು ಬಾರಿ ಈಜಿಪ್ಟ್ ಗೆ ಬರ್ತಾಳೆ. ಈ ಬಾರಿ ಕೂಡ ಈಜಿಪ್ಟ್ ಗೆ ಬಂದಿದ್ದಾಳೆ. ಆಕೆ ಬ್ಯಾಗ್ ನಲ್ಲಿ ಎರಡು ಪೇನ್ ಕಿಲ್ಲರ್ ಮಾತ್ರೆಯಿತ್ತು ಎನ್ನಲಾಗಿದೆ. ರಕ್ಷಣಾ ಸಿಬ್ಬಂದಿ ಮೊದಲು ಮಾತ್ರೆ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಪತಿಗೆ ಅಪಘಾತವಾಗಿದ್ದರಿಂದ ಮಾತ್ರೆ ತೆಗೆದುಕೊಂಡು ಬಂದಿದ್ದೇನೆಂದು ಲಾರಾ ಹೇಳಿದ್ದಾಳೆ. ಸತತ ನಾಲ್ಕು ಗಂಟೆ ವಿಚಾರಣೆ ಮಾಡಿದ ರಕ್ಷಣಾ ಸಿಬ್ಬಂದಿ ಅರೇಬಿಕ್ ಭಾಷೆಯಲ್ಲಿದ್ದ 38 ಪುಟದ ದಾಖಲೆಗೆ ಸಹಿ ಹಾಕುವಂತೆ ಹೇಳಿದ್ದಾರೆ. ಲಾರಾಗೆ ಅರೇಬಿಕ್ ಅರ್ಥವಾಗುತ್ತಿರಲಿಲ್ಲವಂತೆ. ಮಾತ್ರೆ ವಿಷ್ಯವಿರಬೇಕೆಂದು ದಾಖಲೆಗೆ ಸಹಿ ಮಾಡಿದ್ದಾಳೆ. ದಾಖಲೆಗೆ ಸಹಿ ಮಾಡ್ತಿದ್ದಂತೆ ಲಾರಾಳನ್ನು ವಶಕ್ಕೆ ಪಡೆದ ಪೊಲೀಸರು ಜೈಲಿಗಟ್ಟಿದ್ದಾರೆ.

ಸದ್ಯ ಲಾರಾ ಮೇಲೆ ಮಾದಕ ವಸ್ತು ಕಳ್ಳಸಾಗಣೆ ಕೇಸ್ ದಾಖಲಾಗಿದೆ. ಲಾರಾಗೆ ಗಲ್ಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ವಕೀಲರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...