alex Certify
ಕನ್ನಡ ದುನಿಯಾ       Mobile App
       

Kannada Duniya

16 ಕೋಟಿ ಖರ್ಚು ಮಾಡಿ ಈಕೆ ಸರ್ಜರಿ ಮಾಡಿಸಿಕೊಂಡಿದ್ಯಾಕೆ ಗೊತ್ತಾ?

ಪ್ರತಿಯೊಬ್ಬರೂ ಸುಂದರವಾಗಿ ಕಾಣಬೇಕೆಂದು ಬಯಸ್ತಾರೆ. ಅದಕ್ಕಾಗಿ ಬ್ಯೂಟಿಪಾರ್ಲರ್, ಮನೆ ಮದ್ದು ಅದು ಇದು ಅಂತಾ ಖರ್ಚು ಮಾಡ್ತಾರೆ. ಹಣವುಳ್ಳ ಕೆಲವರು ಸರ್ಜರಿ ಮಾಡಿಸಿಕೊಳ್ತಾರೆ. ಸುಂದರವಾಗಿ ಕಾಣಬೇಕೆಂಬ ಹುಚ್ಚಿಗೆ ಬಿದ್ದ ಬ್ರಿಟಿಷ್ ಮೂಲದ ಹುಡುಗಿಯೊಬ್ಬಳು ಬರೋಬ್ಬರಿ 16 ಕೋಟಿ ರೂಪಾಯಿ ಖರ್ಚು ಮಾಡಿದ್ದಾಳೆ.

ಯಸ್, ಡಾಲ್ಗುಡಿಸ್ ಒಂದಲ್ಲ ಎರಡಲ್ಲ 200 ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ. ಸುಂದರವಾಗಿ ಕಾಣಬೇಕೆಂಬುದು ಆಕೆ ಗುರಿ. ತಾನು ದುಡಿದ ಹಣವನ್ನೆಲ್ಲ ಕೇವಲ ಶಸ್ತ್ರಚಿಕಿತ್ಸೆಗೆ ಖರ್ಚು ಮಾಡ್ತಾಳೆ ಈಕೆ. ಹದಿಹರೆಯದಲ್ಲಿದ್ದಾಗ ಡಾಲ್ಗುಡಿಸ್ ತಂದೆ ಮಗಳನ್ನು ಸೌಂದರ್ಯ ಹೀನಳು ಎಂದಿದ್ದನಂತೆ. ಆ ದಿನವೇ ಸುಂದರವಾಗಿ ಕಾಣಲು ಪಣತೊಟ್ಟ ಡಾಲ್ಗುಡಿಸ್ ಶಸ್ತ್ರಚಿಕಿತ್ಸೆ ಶುರುಮಾಡಿದ್ದಾಳೆ.

ಡಾಲ್ಗುಡಿಸ್ ಸುಂದರವಾಗಿಲ್ಲ ಎನ್ನುವ ಕಾರಣಕ್ಕೆ ಯಾರೂ ಮಾತನಾಡಿಸುತ್ತಿರಲಿಲ್ಲವಂತೆ.ತನ್ನ 17ನೇ ವಯಸ್ಸಿನಲ್ಲಿಯೇ ಮೊದಲ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ ಡಾಲ್ಗುಡಿಸ್. ತನ್ನ ಹೆಸರನ್ನು ಸ್ಟಾರ್ ಎಂದು ಬದಲಿಸಿಕೊಂಡಿದ್ದಾಳೆ ಈಕೆ. ಕ್ಲಬ್ ನಲ್ಲಿ ಡಾನ್ಸರ್ ಕೆಲಸ ಮಾಡುವ ಡಾಲ್ಗುಡಿಸ್ ಅಲ್ಲಿ ಬಂದ ಹಣವನ್ನೆಲ್ಲ ತನ್ನ ಶಸ್ತ್ರಚಿಕಿತ್ಸೆಗಾಗಿ ಖರ್ಚು ಮಾಡ್ತಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...