alex Certify
ಕನ್ನಡ ದುನಿಯಾ       Mobile App
       

Kannada Duniya

ಚಾರಣಕ್ಕೆ ಬಂದ ಬ್ರಿಟಿಷ್ ಪ್ರವಾಸಿಗರನ್ನು ಬೆನ್ನಟ್ಟಿ ಬಂದ್ಲು ಮಹಿಳೆ

ಅನ್ನಪೂರ್ಣ ಪರ್ವತಕ್ಕೆ ಚಾರಣಕ್ಕೆ ಬಂದಿದ್ದ ಬ್ರಿಟಿಷ್ ಮಹಿಳೆ ಮತ್ತಾಕೆಯ ಸಾಕುಮಗನಿಗೆ ಕಹಿ ಅನುಭವವಾಗಿದೆ. ನೇಪಾಳಿ ಮಹಿಳೆಯೊಬ್ಬಳು ಇಬ್ಬರನ್ನೂ ಬೆನ್ನಟ್ಟಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ವಿಲ್ಸನ್ ಮತ್ತಾಕೆಯ ಮಗ ಸುಮಾರು 4 ಕಿಮೀ ನಡೆದಿದ್ರು.

ಕೊಂಚ ಆಯಾಸವಾಗಿದೆ, ಚಹಾ ಹೀರೋಣ ಎಂದುಕೊಂಡು ಅಲ್ಲೇ ಇದ್ದ ಅಂಗಡಿಗೆ ಬಂದಿದ್ದಾರೆ. ಎರಡು ಚಹಾಕ್ಕೆ 150 ರೂಪಾಯಿ ಕೊಡುವಂತೆ ನೇಪಾಳಿ ಮಹಿಳೆ ಸೂಚಿಸಿದ್ದಾಳೆ. ಚಹಾದ ಬೆಲೆ ಕೇಳಿ ಶಾಕ್ ಆದ್ರೂ ಸಾವರಿಸಿಕೊಂಡು ವಿಲ್ಸನ್ ಮತ್ತವಳ ಮಗ ಹಣ ಕೊಟ್ಟು ಅಲ್ಲಿಂದ ಹೊರಬಿದ್ರು.

ಈ ವೇಳೆ ಅಂಗಡಿಯಲ್ಲಿ ಹಾಕಿದ್ದ ಚಹಾ ಮತ್ತು ತಿನಿಸುಗಳ ಬೆಲೆಯಿದ್ದ ಬೋರ್ಡ್ ನ ಫೋಟೋ ತೆಗೆದುಕೊಳ್ಳಲು ವಿಲ್ಸನ್ ಮುಂದಾಗಿದ್ದಾಳೆ. ಇದರಿಂದ ಕೆರಳಿದ ಅಂಗಡಿಯಾಕೆ ಇಬ್ಬರನ್ನೂ ಬೆನ್ನಟ್ಟಿಕೊಂಡು ಬಂದ್ಲು.  ವಿಲ್ಸನ್ ಗೆ ಕಲ್ಲಿನಿಂದ್ಲೂ ಹೊಡೆದಿದ್ದಾಳೆ.

ತಪ್ಪಾಯ್ತು ಬಿಟ್ಬುಡು ಅಂತಾ ಬೇಡಿಕೊಂಡ್ರೂ ಸುಮ್ಮನಾಗಿಲ್ಲ. ಮಹಿಳೆ ನಡೆಸಿರೋ ದೌರ್ಜನ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಲ್ಲೇಟಿನಿಂದ ಗಾಯಗೊಂಡಿದ್ದ ಮಹಿಳೆ ಪೊಲೀಸರನ್ನು ಸಂಪರ್ಕಿಸಲು ಯತ್ನಿಸಿದ್ಲು. ಆದ್ರೆ ಎಷ್ಟೋ ದಿನಗಳಿಂದ ಠಾಣೆ ಬಂದ್ ಆಗಿತ್ತು. ಈ ಹಿಂದೆ ಕೂಡ ಆ ನೇಪಾಳಿ ಮಹಿಳೆ ಹಲವು ಪ್ರವಾಸಿಗರ ಮೇಲೆ ಇದೇ ರೀತಿ ಹಲ್ಲೆ ಮಾಡಿದ್ದಾಳಂತೆ.

This woman has had enough of tourists and throws rocks at them

This woman has had enough of tourists and throws rocks at them

Nai-post ni Daily Mail noong Martes, Setyembre 19, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...