alex Certify
ಕನ್ನಡ ದುನಿಯಾ       Mobile App
       

Kannada Duniya

ಫೋಟೋ ಕಾರಣಕ್ಕೆ ವಿದೇಶಿ ಮದುವೆಯೇ ಬ್ಯಾನ್…!

ನೀವೇನಾದ್ರೂ ಗ್ರೀಸ್ ದೇಶದ ರೋಡ್ಸ್ ನಲ್ಲಿರೋ ಸೇಂಟ್ ಪೌಲ್ ಚರ್ಚ್ ನಲ್ಲಿ ಮದುವೆಯಾಗೋ ಕನಸು ಕಂಡಿದ್ರೆ ಆ ಆಸೆಯನ್ನೇ ಬಿಟ್ಟುಬಿಡಿ. ಯಾಕಂದ್ರೆ ಇಲ್ಲಿ ವಿದೇಶೀ ಮದುವೆಗಳನ್ನು ನಿಷೇಧಿಸಲಾಗಿದೆ. ಇದಕ್ಕೆ ಕಾರಣ ಯುವ ಜೋಡಿಯ ಒಂದೇ ಒಂದು ಫೋಟೋ.

ಕಾರ್ಲಿ ಲನ್ ಎಂಬ ಯುವತಿಯ ವಿವಾಹ ಇಲ್ಲಿ ನೆರವೇರಿತ್ತು. ಮದುವೆ ನಂತರ ಯುವ ಜೋಡಿ ಓರಲ್ ಸೆಕ್ಸ್ ಮಾಡ್ತಿರೋ ಫೋಟೋವನ್ನು ಸಾಮಾಜಿಕ ತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಪವಿತ್ರ ಕ್ಷೇತ್ರದಲ್ಲಿ ವಧು-ವರರು ಈ ರೀತಿ ನಡೆದುಕೊಂಡಿರೋದು ಧಾರ್ಮಿಕ ಮುಖಂಡರ ಕೆಂಗಣ್ಣಿಗೆ ತುತ್ತಾಗಿದೆ.

ಹಾಗಾಗಿ ಇನ್ಮುಂದೆ ಈ ಚರ್ಚ್ ನಲ್ಲಿ ವಿದೇಶಿ ಮದುವೆಗಳಿಗೆ ಅವಕಾಶವನ್ನೇ ನೀಡದಿರಲು ನಿರ್ಧರಿಸಲಾಗಿದೆ. ಇದ್ರಿಂದ ಬ್ರಿಟನ್ ನ ನೂರಾರು ಯುವ ಜೋಡಿಗೆ ನಿರಾಸೆಯಾಗಿದೆ ಅನ್ನೋದು ಕೆಲವರ ಅಳಲು. ಯಾಕಂದ್ರೆ ಇಲ್ಲಿ ಮದುವೆಯಾಗುವವರಲ್ಲಿ ಶೇ.99ರಷ್ಟು ಮಂದಿ ಬ್ರಿಟಿಷರೇ ಇರುತ್ತಿದ್ರು.

ಸೆಕ್ಸೀ ಫೋಟೋ ಅಪ್ಲೋಡ್ ಮಾಡಿರೋ ವಧು, ತಾನು ತಮಾಷೆಗೆ ಮಾಡಿದ ಕೆಲಸ ಅದು ಎನ್ನುತ್ತಿದ್ದಾಳೆ. ಆದ್ರೆ ತಮ್ಮ ದೇಶದ ಸಂಪ್ರದಾಯ, ಸಂಸ್ಕೃತಿಗೆ ಅವಮಾನ ಮಾಡುವಂಥ ಕೃತ್ಯ ಅದಾಗಿರೋದ್ರಿಂದ, ಇನ್ಮೇಲೆ ಸೇಂಟ್ ಪೌಲ್ ನಲ್ಲಿ ವಿವಾಹಕ್ಕೆ ಅವಕಾಶವೇ ಇಲ್ಲ ಅಂತಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...