alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಿವುಡ್ ಹಾಡಿಗೆ ಬ್ರಿಟಿಷ್ ದಂಪತಿಗಳ ಭರ್ಜರಿ ಡ್ಯಾನ್ಸ್

britain couple dance

ಮೂರು ದಿನಗಳ ಹಿಂದಷ್ಟೇ ಭಾರತದ ವರನೊಬ್ಬ ವಿವಾಹದ ಮುನ್ನಾ ದಿನ ತನ್ನ ಭಾವಿ ಪತ್ನಿಗೆ ಐಟಂ ಸಾಗ್ ಗೆ ತನ್ನೊಂದಿಗೆ ಹೆಜ್ಜೆ ಹಾಕಲು ಹೇಳಿ ಮದುವೆಯನ್ನೇ ಮುರಿದುಕೊಂಡ ಕುರಿತ ವರದಿ ಓದಿದ್ದೀರಿ. ಆದರೆ ಬ್ರಿಟಿಷ್ ದಂಪತಿಗಳು ತಮ್ಮ ವಿವಾಹ ದಿನದಂದು ಬಾಲಿವುಡ್ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಸುದ್ದಿಯಾಗಿದ್ದಾರೆ.

ಬ್ರಿಟನ್ ನ ಕರೋಲ್ ಮತ್ತು ಡೇವ್ ಅವರುಗಳ ವಿವಾಹ ಕೆಲ ದಿನಗಳ ಹಿಂದೆ ನೆರವೇರಿದ್ದು, ಈ ಸಂದರ್ಭದಲ್ಲಿ ಖ್ಯಾತ ಬಾಲಿವುಡ್ ನಟಿ ಕಂಗನಾ ರನಾವತ್ ಅಭಿನಯದ ‘ಕ್ವೀನ್’ ಚಿತ್ರದ ‘ಲಂಡನ್ ತುಮ್ಕಾಡಾ’ ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ವಿವಾಹಕ್ಕೆ ಆಗಮಿಸಿದ್ದ ಅತಿಥಿಗಳ ಮುಂದೆ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಆ ಮೂಲಕ ಸಂಗೀತಕ್ಕೆ ಭಾಷೆ, ದೇಶದ ಗಡಿಯಿಲ್ಲವೆಂಬುದನ್ನು ಸಾಬೀತುಪಡಿಸಿದ್ದಾರೆ.

ಇವರುಗಳ ಈ ಡ್ಯಾನ್ಸ್ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಈಗಾಗಲೇ 4 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ, 6 ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ‘ಕ್ವೀನ್’ ಚಿತ್ರದ ಈ ಹಾಡು ಉತ್ತರ ಭಾರತೀಯರ ವಿವಾಹಗಳಲ್ಲಿ ಸಾಮಾನ್ಯವಾಗಿದ್ದು, ಈಗ ಬ್ರಿಟನ್ ನಲ್ಲೂ ಫೇಮಸ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...