alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ವಿಮಾನ ಪ್ರಯಾಣಿಕರ ಮಹತ್ವದ ಮಾಹಿತಿಗೆ ಕನ್ನ

ಬ್ರಿಟಿಷ್ ಏರ್ ವೇಸ್ ಪ್ರಯಾಣಿಕರು ಶಾಕ್ ಆಗುವಂತಾ ಮತ್ತು ಬ್ರಿಟನ್ ಏರ್ವೇಸ್ ಅವಮಾನಕ್ಕೀಡಾಗುವಂತಾ ಘಟನೆಯೊಂದು ನಡೆದಿದೆ. ಆಗಸ್ಟ್ 21ರಿಂದ ಸೆಪ್ಟೆಂಬರ್ 5ನೇ ತಾರೀಕಿನ ಒಳಗೆ ನಡೆದಿರುವಂತಾ ವಿಮಾನ ಪ್ರಯಾಣದ ಟಿಕೆಟ್ ಬುಕ್ಕಿಂಗ್ ಮತ್ತು ಹಣ ಪಾವತಿಗೆ ಸಂಬಂಧಿಸಿ ಮಾಹಿತಿ ಕಳುವಾಗಿದೆ ಅನ್ನೋ ವಿಚಾರ ಈಗ ಬೆಳಕಿಗೆ ಬಂದಿದೆ.

ಸುಮಾರು 3 ಲಕ್ಷದ 80 ಸಾವಿರ ಬುಕ್ಕಿಂಗ್ ಗಳ ಹಣ ಪಾವತಿಯ ದತ್ತಾಂಶಗಳನ್ನ ಹ್ಯಾಕರ್ಸ್ ಗಳು ಕಳುವು ಮಾಡಿದ್ದಾರೆ. ಈ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸೋಕೆ ಈಗ ವಿಮಾನ ನಿಲ್ದಾಣದ ಅಧಿಕಾರಿಗಳು ಪ್ರಯತ್ನ ಆರಂಭಿಸಿದ್ದಾರೆ.

ಮೇ 2017 ರಲ್ಲಿ ವಿಮಾನ ನಿಲ್ದಾಣದ ಕಂಪ್ಯೂಟರ್ ಮತ್ತು ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಭಾರೀ ದೋಷ ಕಾಣಿಸಿಕೊಂಡಿತ್ತು. 75 ಸಾವಿರ ಪ್ರಯಾಣಿಕರಿಗೆ ಇದರಿಂದ ತೊಂದರೆ ಉಂಟಾಗಿತ್ತು. ಆನಂತರ ವಿಮಾನ ನಿಲ್ದಾಣ ಅಧಿಕಾರಿಗಳು ಆ ಸಮಸ್ಯೆಯನ್ನ ಪರಿಹರಿಸಿದ್ದರು. ಈಗ ಕಾಣಿಸಿಕೊಂಡಿರುವ ಈ ಸಮಸ್ಯೆಯಿಂದಾಗಿ ವೈಮಾನಿಕ ಇಲಾಖೆ ಮತ್ತೆ ಮುಖಭಂಗವನ್ನು ಎದುರಿಸುವಂತಾಗಿದೆ.

ಕಳುವಾಗಿರುವ ದತ್ತಾಂಶಗಳನ್ನ ಮರಳಿ ಪಡೆಯೋದಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳು ಈಗ ಬ್ಯಾಂಕ್ ಸಹಾಯ ಪಡೆದಿದ್ದಾರೆ. ಆಗಸ್ಟ್ 21ರಿಂದ ಸೆಪ್ಟೆಂಬರ್ 5ರ ಒಳಗೆ ಆಗಿರುವಂತಾ ಪೇಮೆಂಟ್ ಗಳ ಮಾಹಿತಿಯನ್ನು ವಿಮಾನ ನಿಲ್ದಾಣ ಕಾರ್ಯ ನಿರ್ವಹಣಾ ಮಂಡಳಿ ಕೇಳಿದೆ. ಆ ಮೂಲಕ ಪ್ರಯಾಣಿಕರ ಮಾಹಿತಿ ಪತ್ತೆಗೆ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...