alex Certify
ಕನ್ನಡ ದುನಿಯಾ       Mobile App
       

Kannada Duniya

3 ಬಾರಿ ಲಿಂಗ ಬದಲಾವಣೆ ಮಾಡಿಸಿಕೊಂಡಿದ್ದಾಳೆ ಈಕೆ

g1

ಎಲ್ಲಾ ಸ್ತ್ರೀಯರಂತೆ ರಿಯಾ ಕೂಪರ್ ಗೆ ಕೂಡ ಮದುವೆಯಾಗಬೇಕು, ತಾಯಿಯಾಗಬೇಕು ಅನ್ನೋ ಆಸೆಯಿತ್ತು. ಆದ್ರೆ 23 ವರ್ಷದ ರಿಯಾ ಹುಟ್ಟಿದಾಗ ಹುಡುಗನಾಗಿದ್ಲು. 23 ವರ್ಷದ ರಿಯಾ ಮೂರು ಬಾರಿ ಲಿಂಗ ಬದಲಾಯಿಸಿದ್ದಾಳೆ.

g

ಲಿಂಗ ವಿನಿಮಯ ಮಾಡಿಕೊಂಡ ಬ್ರಿಟನ್ ನ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ರಿಯಾ ಪಾತ್ರಳಾಗಿದ್ದಾಳೆ. ದೇಹ ಹುಡುಗನದ್ದಾದ್ರೂ ರಿಯಾ ಹುಡುಗಿ ಅಂತಾ ವೈದ್ಯರು ಕೂಡ ಹೇಳಿದ್ದಾರೆ. 15 ವರ್ಷದವಳಿದ್ದಾಗ ಪ್ರೌಢಾವಸ್ಥೆಗೆ ಬರದಂತೆ ತಡೆಯಲು ಚುಚ್ಚುಮದ್ದು ನೀಡಲಾಗಿತ್ತು.

ಮುಖ ಮತ್ತು ಎದೆಯಲ್ಲಿ ಕೂದಲು ಬೆಳೆಯದಂತೆ ತಡೆಗಟ್ಟಲು ಹಾರ್ಮೋನ್ ಇಂಜೆಕ್ಷನ್ ಕೂಡ ಪಡೆದಿದ್ದಾಳೆ. ಸ್ತ್ರೀ ಎಂದು ಸಮಾಜ ನನ್ನನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ಅಂಜಿಕೆ ಅವಳಿಗಿತ್ತು. ಆದ್ರೆ ಸಲಿಂಗಿ ಎಂದೆನಿಸಿಕೊಳ್ಳಲು ಇಷ್ಟವಿರಲಿಲ್ಲ. ಹಾಗಾಗಿ ಸಂಪೂರ್ಣ ಸ್ತ್ರೀಯಾಗಿ ಆಕೆ ಬದಲಾಗಿದ್ದಾಳೆ.

g2

ಐದು ವರ್ಷಗಳಲ್ಲಿ ರಿಯಾ ಎರಡು ಬಾರಿ ಲಿಂಗ ಬದಲಾವಣೆ ಚಿಕಿತ್ಸೆಗೆ ಒಳಗಾಗಿದ್ದಾಳೆ. ಸ್ತನಗಳ ಸರ್ಜರಿಗಾಗಿಯೇ ಆಕೆ 4 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ. ಈಗ ಗುಪ್ತಾಂಗಗಳ ಬದಲಾವಣೆ ಕೂಡ ಆಗಿದೆ. ಈ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ರಿಯಾ ಖಿನ್ನತೆಗೂ ಒಳಗಾಗಿದ್ಲು.

g3

ಡ್ರಗ್ಸ್ ಚಟ ಆಕೆಗೆ ಅಂಟಿಕೊಂಡಿತ್ತು. 18 ವರ್ಷದವಳಿದ್ದಾಗ 2 ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಆದ್ರೀಗ ಸಂಪೂರ್ಣ ಸ್ತ್ರೀಯಾಗಿ ಬದಲಾಗಿರುವ ರಿಯಾಗೆ, ಸೂಕ್ತ ಸಂಗಾತಿಯ ನಿರೀಕ್ಷೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...