alex Certify
ಕನ್ನಡ ದುನಿಯಾ       Mobile App
       

Kannada Duniya

‘ಐರನ್ ಮ್ಯಾನ್’ ನಂತೆ ಹಾರಬಲ್ಲ ಈ ಸೂಟ್ ಬೆಲೆ ಎಷ್ಟು ಗೊತ್ತಾ?

ಸೂಟ್ ಧರಿಸಿ ಐರನ್ ಮ್ಯಾನ್ ರೀತಿಯಲ್ಲಿ ಮೇಲೆ ಹಾರಬಹುದು ಎಂದ್ರೆ ನಂಬೋಕೆ ಸಾಧ್ಯವಿಲ್ಲ. ಆದ್ರೆ ಬ್ರಿಟಿಷ್ ಸಂಶೋಧಕ ಹಾಗೂ ವಾಣಿಜ್ಯೋದ್ಯಮಿ ರಿಚರ್ಡ್ ಬ್ರೌನಿಂಗ್ ಇದನ್ನು ಸತ್ಯ ಮಾಡಿದ್ದಾರೆ. ರಿಚರ್ಡ್ ತಯಾರಿಸಿರುವ ಸೂಟ್ ಸಾಕಷ್ಟು ವಿಶೇಷತೆ ಹೊಂದಿದೆ.

ಸುಮಾರು 50 ಕಿಲೋಮೀಟರ್ ಪ್ರತಿ ಗಂಟೆ ಹಾರಬಹುದಂತೆ. 12 ಸಾವಿರ  ಅಡಿ ಎತ್ತರದವರೆಗೆ ಹಾರಾಟ ನಡೆಸಬಹುದಂತೆ. ಸೂಟ್ ಗೆ ಐದು ಜೆಟ್ ಇಂಜಿನ್, ವಿಶೇಷ ತಂತ್ರಜ್ಞಾನ ಹಾಗೂ 3ಡಿ ಪ್ರಿಂಟೆಡ್ ಭಾಗಗಳನ್ನು ಬಳಸಲಾಗಿದೆ. ಇದನ್ನು ಬ್ರೌನಿಂಗ್ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಇದ್ರ ಬೆಲೆ 4.42 ಲಕ್ಷ ಡಾಲರ್. ( ಸುಮಾರು 3 ಕೋಟಿ ರೂ.)

ಬ್ರೌನಿಂಗ್ ತಂದೆ, ಅಜ್ಜ ಎಲ್ಲರೂ ವಿಮಾನ ಕಂಪನಿಯಲ್ಲಿಯೇ ಕೆಲಸ ಮಾಡಿದ್ದಾರೆ. ಐರನ್ ಮ್ಯಾನ್ ಸಿನಿಮಾ ನೋಡಿ ಉತ್ಸುಕರಾದ ಬ್ರೌನಿಂಗ್ ಸೂಟ್ ತಯಾರಿಸುವ ಕೆಲಸ ಶುರು ಮಾಡಿದ್ದರಂತೆ. ಆರಂಭದಲ್ಲಿ ವಿಫಲವಾದ್ರೂ ಕೊನೆಯಲ್ಲಿ ಫಲ ಸಿಕ್ಕಿದೆ ಎನ್ನುತ್ತಾರೆ. ಹೆಲಿಕಾಪ್ಟರ್ ಅಥವಾ ವಿಮಾನ ಹೋಗಲು ಅಸಾಧ್ಯವಾದ ಜಾಗದಲ್ಲಿ ಸೇನೆ ಕೂಡ ಇದನ್ನು ಬಳಸಬಹುದು ಎನ್ನುತ್ತಾರೆ ಬ್ರೌನಿಂಗ್.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...