alex Certify
ಕನ್ನಡ ದುನಿಯಾ       Mobile App
       

Kannada Duniya

ಬೊಜ್ಜಿನ ಸಮಸ್ಯೆ ತಡೆಯಲು ಹೋಟೆಲ್ ಗಳಲ್ಲೂ ಕ್ಯಾಲೋರಿ ಕೌಂಟ್

ಬೊಜ್ಜು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಬಹುದೊಡ್ಡ ಆರೋಗ್ಯ ಸಮಸ್ಯೆಯಾಗಿದೆ. ಜನರು ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಿಲ್ಲ. ಜಂಖ್ ಫುಡ್ ಗಳ ಮೊರೆಹೋಗ್ತಿದ್ದಾರೆ. ಕ್ಯಾಲೋರಿಗಳ ಬಗ್ಗೆ ಗಮನ ಕೊಡುತ್ತಿಲ್ಲ.

ಬ್ರಿಟನ್ ನಲ್ಲಿ ಬಿಡುಗಡೆ ಮಾಡಿರೋ ಅಂಕಿ ಅಂಶಗಳ ಪ್ರಕಾರ ಜನರು ಪ್ರತಿದಿನ 200-300 ಕ್ಯಾಲೋರಿ ಅಧಿಕ ಸೇವನೆ ಮಾಡ್ತಿದ್ದಾರಂತೆ. ಹಾಗಾಗಿ ಅಲ್ಲಿನ ಆರೋಗ್ಯ ಇಲಾಖೆ ಫಾಸ್ಟ್ ಫುಡ್ ಮಳಿಗೆಗಳು ಮತ್ತು ಸೂಪರ್ ಮಾರ್ಕೆಟ್ ನಲ್ಲಿರೋ ರೆಡಿ ಮೀಲ್ ಗಳಿಗೆ ಹೊಸ ನಿಯಮ ವಿಧಿಸಲು ಮುಂದಾಗಿದೆ.

ಹೊಸ ನಿಯಮದ ಪ್ರಕಾರ ಮಳಿಗೆಗಳಲ್ಲಿ ಸಿಗುವ ಲಂಚ್ ಮತ್ತು ಡಿನ್ನರ್ ಕೇವಲ 600 ಕ್ಯಾಲೋರಿ ಹೊಂದಿರಬೇಕು. ಬೆಳಗಿನ ತಿಂಡಿ 400 ಕ್ಯಾಲೋರಿಗಿಂತ ಹೆಚ್ಚಿರಬಾರದು. ಬೊಜ್ಜಿನ ಸಮಸ್ಯೆಗೆ ಅಂತ್ಯ ಹಾಡಲು ದೇಶಾದ್ಯಂತ ಈ ಡಯಟ್ ಪ್ಲಾನ್ ಜಾರಿ ಮಾಡಲಾಗುತ್ತಿದೆ.

ದಿನಕ್ಕೆ ವ್ಯಕ್ತಿಯೊಬ್ಬ 1600 ಕ್ಯಾಲೋರಿಗಿಂತ ಅಧಿಕ ಆಹಾರ ಸೇವಿಸಬಾರದು ಅನ್ನೋದು ಸರ್ಕಾರದ ನಿಯಮ. ಸ್ನಾಕ್ಸ್ ಕೂಡ 100 ಕ್ಯಾಲೋರಿ ಮೀರಬಾರದು. ಸಮೀಕ್ಷೆ ಪ್ರಕಾರ ಇಂಗ್ಲೆಂಡ್ ನಲ್ಲಿ ಶೇ.63ರಷ್ಟು ವಯಸ್ಕರು ಅಧಿಕ ತೂಕ ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...