alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ಲೈನಲ್ಲಿ ಮಾರಾಟವಾಗ್ತಿದೆ ರಾಜಮನೆತನದ ಮದುವೆಯಲ್ಲಿ ಸಿಕ್ಕ ಉಡುಗೊರೆ…!

ರಾಜಕುಮಾರ ಹ್ಯಾರಿ ಹಾಗೂ ನಟಿ ಮೇಘನ್ ಮದುವೆ ಶನಿವಾರ ಅದ್ಧೂರಿಯಾಗಿ ನಡೆದಿದೆ. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸೇರಿದಂತೆ ಅನೇಕ ಪ್ರಸಿದ್ಧ ವ್ಯಕ್ತಿಗಳು ಮದುವೆ ಸಮಾರಂಭಕ್ಕೆ ಬಂದಿದ್ದರು. ಮದುವೆಗೆ ಬಂದ ಅತಿಥಿಗಳಿಗೆ ಭರ್ಜರಿ ಉಡುಗೊರೆ ನೀಡಲಾಗಿದೆ.

ಮದುವೆ ಹಿನ್ನೆಲೆಯಲ್ಲಿ ರಾಜಮನೆತನದ ಸದಸ್ಯರು ನೀಡಿದ ಉಡುಗೊರೆಯನ್ನು ಜನರು ಆನ್ಲೈನ್ ನಲ್ಲಿ ಮಾರಾಟ ಮಾಡಲು ಶುರು ಮಾಡಿದ್ದಾರೆ. ಆಶ್ಚರ್ಯವಾದ್ರೂ ಇದು ನಿಜ. ಆನ್ಲೈನ್ ವೆಬ್ಸೈಟ್ ಇಬೇಯಲ್ಲಿ ಉಡುಗೊರೆ ವಸ್ತುಗಳನ್ನು ಮಾರಾಟಕ್ಕಿಡಲಾಗಿದೆ. ಈ ಉಡುಗೊರೆ ಬೆಲೆ 112 ಪೌಂಡ್ (10241 ರೂಪಾಯಿ) ನಿಂದ 10100 ಪೌಂಡ್ ( 9.23 ಲಕ್ಷ ರೂಪಾಯಿ).

ಇಷ್ಟು ದುಬಾರಿಯಾಗಿರುವ ಈ ಉಡುಗೊರೆಯನ್ನು ಯಾರೂ ಖರೀದಿಸಲು ಮುಂದಾಗ್ತಾರೆ ಎಂದು ಕೇಳಬೇಡಿ. ಈಗಾಗಲೇ 53 ಜನರು ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ. ರಾಜಮನೆತನದ ಮದುವೆಯಲ್ಲಿ 2640 ಮಂದಿಗೆ ಉಡುಗೊರೆ ನೀಡಲಾಗಿತ್ತು. ಗಿಫ್ಟ್ ಪ್ಯಾಕ್ ನಲ್ಲಿ ಸರ್ವೀಸ್ ಬುಕ್ಲೆಟ್, ಗೋಲ್ಡ್ ಚಾಕಲೇಟ್ ಕಾಯಿನ್, ಪೋಸ್ಟ್ ಕಾರ್ಡ್, ಗಿಫ್ಟ್ ವೋಚರ್ ಸೇರಿದಂತೆ ಅನೇಕ ವಸ್ತುಗಳಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...