alex Certify
ಕನ್ನಡ ದುನಿಯಾ       Mobile App
       

Kannada Duniya

63 ಕೋಟಿ ಮೌಲ್ಯದ ಉಡುಗೊರೆ ವಾಪಸ್ ಮಾಡಲಿದ್ದಾರೆ ಪ್ರಿನ್ಸ್ ಹ್ಯಾರಿ ಜೋಡಿ

ರಾಜಕುಮಾರ ಹ್ಯಾರಿ ಹಾಗೂ ನಟಿ ಮೇಗನ್ ಮೈಕಲ್ ಜೋಡಿಗೆ ಮದುವೆ ವೇಳೆ ಸುಮಾರು 7 ಮಿಲಿಯನ್ ಪೌಂಡ್ (63 ಕೋಟಿ ರೂ.) ಮೌಲ್ಯದ ವಸ್ತುಗಳು ಉಡುಗೊರೆ ರೂಪದಲ್ಲಿ ಸಿಕ್ಕಿವೆ. ಈಗ ಜೋಡಿ ಈ ಎಲ್ಲ ಉಡುಗೊರೆಯನ್ನು ವಾಪಸ್ ಮಾಡಬೇಕಿದೆ. ನಿಯಮದ ಪ್ರಕಾರ ಯಾವುದೇ ಕಂಪನಿ ಪ್ರಚಾರಕ್ಕಾಗಿ ರಾಜಮನೆತನದ ಜೋಡಿಗೆ ವಸ್ತುಗಳನ್ನು ಉಡುಗೊರೆಯಾಗಿ ನೀಡುವಂತಿಲ್ಲ.

ಮೇ.19ರಂದು ಹ್ಯಾರಿ-ಮೇಗನ್ ಮದುವೆ ನೆರವೇರಿದೆ. ಮದುವೆಯಲ್ಲಿ ಉಡುಗೊರೆ ನೀಡಬೇಡಿ ಎಂದು ಮೊದಲೇ ಹೇಳಲಾಗಿತ್ತು. ಉಡುಗೊರೆ ಬದಲು ಹಣ ನೀಡಿ ಎಂದು ಹೇಳಲಾಗಿತ್ತು. ಆದ್ರೂ 63 ಕೋಟಿ ಮೌಲ್ಯದ ಉಡುಗೊರೆ ಬಂದಿದೆ. ಅನೇಕ ಕಂಪನಿಗಳು ಹೊಸ ದಂಪತಿಗೆ ದುಬಾರಿ ಬೆಲೆಯ ಉಡುಗೊರೆ ಕಳುಹಿಸಿದ್ದಾರೆ.

ವರದಿ ಪ್ರಕಾರ ಕಂಪನಿಯೊಂದು ಈಜುಡುಗೆಯನ್ನೂ ಕಳುಹಿಸಿದೆಯಂತೆ. ಕೆನ್ಸಿಂಗ್ಟನ್ ಪ್ಯಾಲೇಸ್ ನಿಯಮದ ಪ್ರಕಾರ ಯುಕೆಯಲ್ಲಿ ವಾಸವಾಗಿರುವ ಯಾವುದೇ ವ್ಯಕ್ತಿ ಅಪರಿಚಿತರಿಂದ ಬಂದ ಉಡುಗೊರೆಯನ್ನು ಸ್ವೀಕರಿಸಬಾರದು. ಒಂದು ವೇಳೆ ಸ್ವೀಕಾರ ಮಾಡಿದ್ರೆ ಈ ವಸ್ತುವನ್ನು ವಾಣಿಜ್ಯ ಬಳಕೆಗೆ ಬಳಸುವುದಿಲ್ಲವೆಂದು ಅಧಿಕೃತ ಹೇಳಿಕೆ ನೀಡಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...