alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿತನ ಹೋಗಲಾಡಿಸಲು ಬ್ರಿಟನ್ ನಲ್ಲಿ ಶುರುವಾಗಿದೆ ಈ ಕೆಲಸ

ವಿಶ್ವದಲ್ಲಿ ಮೊದಲ ಬಾರಿ ಇಂಥ ಸಚಿವಾಲಯವೊಂದು ಸೃಷ್ಟಿಯಾಗಿದೆ. ಜನರ ಒಂಟಿತನ ಹೋಗಲಾಡಿಸಲು ಲೋನ್ಲಿನೆಸ್ ಸಚಿವಾಲಯವನ್ನು ಬ್ರಿಟನ್ ನಲ್ಲಿ ರಚನೆ ಮಾಡಲಾಗಿದೆ. 42 ವರ್ಷದ ಟ್ರೇಸಿ ಕ್ರೌಚಿಗೆ ಸಚಿವಾಲಯದ ಜವಾಬ್ದಾರಿ ನೀಡಲಾಗಿದೆ.

ಬ್ರಿಟನ್ ನಲ್ಲಿ ಶೇಕಡಾ 14 ರಷ್ಟು ಅಂದ್ರೆ ಸುಮಾರು 90 ಲಕ್ಷ ಜನರು ಒಂಟಿತನದಿಂದ ಬಳಲುತ್ತಿದ್ದಾರೆ. ಇಂಥವರಿಗೆ ಸಿಗರೇಟ್ ಸಂಗಾತಿಯಾಗ್ತಿದೆ. ದಿನಕ್ಕೆ 15 ಕ್ಕೂ ಹೆಚ್ಚು ಸಿಗರೇಟ್ ಸೇದುವವರ ಸಂಖ್ಯೆ ಬ್ರಿಟನ್ ನಲ್ಲಿ ಹೆಚ್ಚಿದೆ. ಟ್ರೇಸಿಗೆ ಸರ್ಕಾರ ಲೋನ್ಲಿನೆಸ್ ಸಚಿವಾಲಯದ ಜವಾಬ್ದಾರಿ ನೀಡುತ್ತಿದ್ದಂತೆ ಆಕೆ ಇ-ಮೇಲ್ ತುಂಬಿದೆ. ಫೋನ್ ಒಂದೇ ಸಮನೆ ಬಡಿದುಕೊಳ್ತಿದೆ.

ಬ್ರಿಟನ್ ಸಂಸದ ಜೋ ಕಾಕ್ಸ್ ಒಂಟಿತನ ಸಮಸ್ಯೆ ದೂರ ಮಾಡುವ ಬಗ್ಗೆ ಸಮೀಕ್ಷೆ ನಡೆಸಿದ್ದರು. ಇದ್ರಲ್ಲಿ ಲೋನ್ಲಿನೆಸ್ ಸಚಿವಾಲಯ ರಚನೆ ಮಾಡುವ ಒತ್ತಡ ಕೇಳಿ ಬಂದಿತ್ತು. 2016 ರಲ್ಲಿ ಕಾಕ್ಸ್ ಹತ್ಯೆಗೀಡಾದ್ರು. ಈಗ ಟ್ರೇಸಿಗೆ ಈ ಜವಾಬ್ದಾರಿ ನೀಡಲಾಗಿದೆ. ಲೋನ್ಲಿನೆಸ್ ಸಚಿವಾಲಯದ ಕಾರ್ಯವೈಖರಿ ತಿಳಿಯಲು ಬೇರೆ ಬೇರೆ ದೇಶಗಳಿಂದ ಸಚಿವರು ಬರ್ತಿದ್ದಾರೆ. ನಾರ್ವೆ, ಡೆನ್ಮಾರ್ಕ್, ಕೆನಡಾ, ಯುಎಇ, ಸ್ವೀಡೆನ್, ಐಸ್ಲ್ಯಾಂಡ್, ನ್ಯೂಜಿಲ್ಯಾಂಡ್, ಜಪಾನ್ ಮತ್ತು ಜರ್ಮನಿ ಸಚಿವರು ಬಂದು ಹೋಗಿದ್ದಾರೆ.

ಬ್ರಿಟನ್ ನಲ್ಲಿ ಸುಮಾರು 16 ರಿಂದ 24 ವರ್ಷ ವಯಸ್ಸಿನ ಯುವಕರು ಒಂಟಿತನಕ್ಕೊಳಗಾಗ್ತಿದ್ದಾರಂತೆ. ಇದಕ್ಕೆ ಸಾಮಾಜಿಕ ಜಾಲತಾಣ ಕಾರಣ. ಸಾಮಾಜಿಕ ಜಾಲತಾಣದಲ್ಲಿ 200 ಕ್ಕೂ ಹೆಚ್ಚು ಸ್ನೇಹಿತರಿರುತ್ತಾರೆ. ಆದ್ರೆ ಯಾರೂ ಆತ್ಮೀಯರಾಗಿರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿಯೇ ಇದಕ್ಕೆ ಪರಿಹಾರವೂ ಇದೆ. ಹಿರಿಯರಿಗೆ ಕಂಪ್ಯೂಟರ್, ಸಾಮಾಜಿಕ ಜಾಲತಾಣದ ಬಗ್ಗೆ ಜ್ಞಾನ ನೀಡಿ ದೇಶದ ಬೇರೆ ಬೇರೆ ಮೂಲೆಯಲ್ಲಿರುವ ಯುವಕರನ್ನು ಹಿರಿಯರ ಜೊತೆ ಸಂಪರ್ಕಿಸಬಹುದು ಎಂದು ಟ್ರೇಸಿ ಹೇಳ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...