alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯ ಯುವಕನೀಗ ಬ್ರಿಟನ್ ನ ಅತಿ ಕಿರಿಯ ಕುಬೇರ

ಭಾರತೀಯ ಮೂಲದ ಯುವಕ ಬ್ರಿಟನ್ ನ ಅತಿ ಕಿರಿಯ ಮಿಲಿಯನೇರ್ ಎನಿಸಿಕೊಂಡಿದ್ದಾನೆ. ಆನ್ ಲೈನ್ ಎಸ್ಟೇಟ್ ಏಜೆನ್ಸಿ ಇಟ್ಕೊಂಡಿರೋ ಈತ ಕೇವಲ ಒಂದು ವರ್ಷದಲ್ಲೇ 12 ಮಿಲಿಯನ್ ಪೌಂಡ್ ಆಸ್ತಿ ಸಂಪಾದಿಸಿದ್ದಾನೆ. ಮಿಲಿಯನೇರ್ ಅಕ್ಷಯ್ ರುಪಾರೆಲಿಯಾಗೆ ಈಗ ಕೇವಲ 19ರ ಹರೆಯ.

ಓದಿನ ಜೊತೆ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಅಕ್ಷಯ್ ಆರಂಭಿಸಿದ್ದ. ನಂತರ doorsteps.co.uk ಅನ್ನೋ ಕಂಪನಿ ಶುರು ಮಾಡಿದ್ದಾನೆ. ಲಾಂಚ್ ಆಗಿ ಕೇವಲ 16 ತಿಂಗಳುಗಳಲ್ಲೇ ಈ ವೆಬ್ ಸೈಟ್ ಬ್ರಿಟನ್ ನ 18ನೇ ಅತಿದೊಡ್ಡ ರಿಯಲ್ ಎಸ್ಟೇಟ್ ಏಜೆನ್ಸಿ ಎನಿಸಿಕೊಂಡಿದೆ.

ಉದ್ಯಮ ಆರಂಭಿಸಿದಾಗಿನಿಂದ ಈವರೆಗೆ ಅಕ್ಷಯ್ ಸುಮಾರು 100 ಮಿಲಿಯನ್ ಪೌಂಡ್ ಮೊತ್ತದ ವಹಿವಾಟು ನಡೆಸಿದ್ದಾರಂತೆ. ಅಕ್ಷಯ್ ಈಗ ಅದೆಷ್ಟು ಫೇಮಸ್ ಅಂದ್ರೆ ಕೇವಲ 3 ವಾರಗಳೊಳಗೆ ಆಸ್ತಿ ಮಾರಾಟ ಮಾಡುವ ಸಾಮರ್ಥ್ಯ ಹೊಂದಿದ್ದಾನಂತೆ.

7000 ಪೌಂಡ್ ಹಣ ಹೂಡಿಕೆ ಮಾಡಿ ಅಕ್ಷಯ್ ಕಂಪನಿ ಆರಂಭಿಸಿದ್ದ. 12 ಜನರನ್ನು ಜೊತೆಗೆ ಕೆಲಸಕ್ಕೆ ತೆಗೆದುಕೊಂಡಿದ್ದ. ಅಕ್ಷಯ್ ತಂದೆ ಕೌಶಿಕ್ ಕೇರ್ ವರ್ಕರ್ ಆಗಿದ್ದಾರೆ. ತಾಯಿ ರೇಣುಕಾ ಕಿವುಡ ಮಕ್ಕಳ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡ್ತಾರೆ. ಈಗ ಅಕ್ಷಯ್ ತಿಂಗಳಿಗೆ ಕಡಿಮೆ ಅಂದ್ರೂ 1000 ಪೌಂಡ್ ಗೂ ಅಧಿಕ ಲಾಭ ಗಳಿಸ್ತಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...