alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಗಳಿಗೆ ಹಣ ಪಾವತಿಸುವಂತೆ ಮಲ್ಯಗೆ ಬ್ರಿಟನ್ ಕೋರ್ಟ್ ಆದೇಶ

ಲಂಡನ್ ನಲ್ಲಿರುವ ಉದ್ಯಮಿ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಭಾರತದ ಬ್ಯಾಂಕ್ ಗಳಿಗೆ ಮೋಸ ಮಾಡಿ ದೇಶಬಿಟ್ಟು ಓಡಿ ಹೋಗಿರುವ ಮಲ್ಯಗೆ ಬ್ರಿಟನ್ ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. ಭಾರತದ 13 ಬ್ಯಾಂಕ್ ಗಳಿಗೆ 2 ಲಕ್ಷ ಪೌಂಡ್ (1.81 ಕೋಟಿ) ಹಣ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.

13 ಬ್ಯಾಂಕ್ ಒಕ್ಕೂಟ ಮಲ್ಯ ವಿರುದ್ಧ ಕೋರ್ಟ್ ನಲ್ಲಿ ಹೋರಾಟ ನಡೆಸುತ್ತಿದೆ. ಈ ಬ್ಯಾಂಕ್ ಗಳ ಕಾನೂನು ಹೋರಾಟದ ವೆಚ್ಚವನ್ನು ಮಲ್ಯ ನೀಡಬೇಕೆಂದು ನ್ಯಾಯಮೂರ್ತಿ ಆ್ಯಂಡ್ರೋ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಬ್ರಿಟನ್ ನಲ್ಲಿ ನಡೆದ ಕರ್ನಾಟಕ ಸಾಲ ವಸೂಲಾತಿ ಪ್ರಾಧಿಕಾರದ ಪ್ರಕರಣದ ವಿಚಾರಣೆ ವೆಚ್ಛ ನೀಡುವಂತೆಯೂ ಸೂಚನೆ ನೀಡಿದೆ.

ಭಾರತದಿಂದ ಓಡಿ ಹೋಗಿರುವ ಮಲ್ಯ 9000 ಕೋಟಿ ರೂಪಾಯಿ ಸಾಲ ಮರುಪಾವತಿ ಮಾಡಬೇಕಿದೆ. ಭಾರತಕ್ಕೆ ಮಲ್ಯ ಹಸ್ತಾಂತರ ಪ್ರಕರಣದ ವಿಚಾರಣೆ ಇನ್ನೊಂದು ಕೋರ್ಟ್ ನಲ್ಲಿ ನಡೆಯುತ್ತಿದೆ. ವಿಚಾರಣೆ ಪೂರ್ಣಗೊಳಿಸಿರುವ ಲಂಡನ್ ಕೋರ್ಟ್ ಮುಂದಿನ ತಿಂಗಳು ಅಂತಿಮ ತೀರ್ಮಾನ ನೀಡುವ ಸಾಧ್ಯತೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...