alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವಿವಿ ವಿದ್ಯಾರ್ಥಿಗಳು ಕ್ಲೀನರ್ ಗೆ ನೀಡಿದ್ದಾರೆ ಸ್ಪೆಷಲ್ ಗಿಫ್ಟ್

ಬ್ರಿಸ್ಟಲ್ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು, ವಿಶ್ವ ವಿದ್ಯಾಲಯದಲ್ಲಿ ಕೆಲಸ ಮಾಡುವ ಕ್ಲೀನರ್ ಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಹಾಗಿದ್ರೆ, ಆ ಗಿಫ್ಟ್ ಏನು…? ಉಡುಗೊರೆ ನೀಡಲು ವಿದ್ಯಾರ್ಥಿಗಳು ಏನೆಲ್ಲಾ ಮಾಡಿದ್ರು ಎಂಬ ಕುತೂಹಲನಾ…?

ಬ್ರಿಸ್ಟಲ್ ವಿಶ್ವ ವಿದ್ಯಾಲಯದ ಕ್ಲೀನರ್ ದಶಕಗಳಿಂದ ತನ್ನೂರಿಗೆ ಹೋಗಿರಲಿಲ್ಲ. ಇದನ್ನು ಅರಿತ ವಿದ್ಯಾರ್ಥಿಗಳು ಚಂದಾ ಎತ್ತಲು ಮುಂದಾಗಿದ್ದಾರೆ. ಕ್ಲೀನರ್ ಗೆ ಸಹಾಯ ಮಾಡಲು, ವಿದ್ಯಾರ್ಥಿಯೊಬ್ಬ ಸಹ ವಿದ್ಯಾರ್ಥಿಗಳಲ್ಲಿ ಮನವಿ ಸಹ ಮಾಡಿಕೊಂಡಿದ್ದಾರೆ. ಈ ಸುದ್ದಿ ತಿಳಿದ ಮೇಲೆ ವಿದ್ಯಾರ್ಥಿಗಳು ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ. ಪರಿಣಾಮ ಅಂದಾಜಿಸಲಾಗಿದ್ದ  1500 ಪೌಂಡ್ ಹಣವನ್ನು ಕೇವಲ ಒಂದು ವಾರದಲ್ಲಿ ಕ್ರೂಢಿಕರಿಸುವಲ್ಲಿ ಸಫಲರಾಗಿದ್ದಾರೆ.

ಹಣ ಜಮಾ ಆಗುತ್ತಿದ್ದಂತೆ ವಿದ್ಯಾರ್ಥಿಗಳು ಕ್ಲೀನರ್ ಹರ್ಮನ್ ಗಾರ್ಡನ್ ಕೈಗೆ ನೀಡಿದ್ದಾರೆ. ಅಲ್ಲದೆ ಇದ್ರಿಂದ ತಮ್ಮ ಕುಟುಂಬಸ್ಥರ ಭೇಟಿ ಮಾಡುವಂತೆ ಸೂಚಿಸಿದ್ದಾರೆ. ವಿದ್ಯಾರ್ಥಿಗಳ ಸಹಾಯ ಕಂಡು  ಹರ್ಮನ್ ಭಾವುಕರಾದ್ರು. ಹರ್ಮನ್, ತಮ್ಮ ಕುಟುಂಬಸ್ಥರನ್ನು ಭೇಟಿಯಾಗಲು ಜಮೈಕಾಗೆ ತೆರಳಿದ್ದಾರೆ.

ಸದ್ಯ ಹರ್ಮನ್ ರಜೆಯ ಮಜೆಯಲ್ಲಿದ್ದು, ಕುಟುಂಬದ ಜೊತೆ ಎಂಜಾಯ್ ಮಾಡ್ತಿದ್ದಾರೆ. ಇದೇ ವೇಳೆ ಹರ್ಮನ್ ತಮ್ಮ 23ನೇ ಮದುವೆ ವಾರ್ಷಿಕೋತ್ಸವನ್ನು ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ಈ ಸುದ್ದಿಯನ್ನು ಬ್ರಿಸ್ಟಲ್ ವಿಶ್ವ ವಿದ್ಯಾಲಯದ ಸಿಬ್ಬಂದಿಗಳು ಸಾಮಾಜಿಕ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ಹರ್ಮನ್ ಫೋಟೋಗೆ ಸುಮಾರು 2600 ಲೈಕ್ ಗಳು ಸಿಕ್ಕಿದ್ದು, ನೂರಕ್ಕೂ ಹೆಚ್ಚು ಜನ ಕಮೆಂಟ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...