alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಟಿಕೆಟ್ ದರದಲ್ಲಿ ಕಾರು ಖರೀದಿಸಿ ಪ್ರಯಾಣ…!

ಲಂಡನ್ ನಿಂದ ಬ್ರಿಸ್ಟಲ್ ಗೆ ರೈಲು ಪ್ರಯಾಣ ಬಲು ದುಬಾರಿ. ವಿಮಾನದ ಟಿಕೆಟ್ ವೆಚ್ಚ ಭರಿಸಲು ಅಸಾಧ್ಯ ಅನ್ನೋ ಕಾರಣಕ್ಕೆ ರೈಲಿನಲ್ಲಿ ಪ್ರಯಾಣಿಸಲು ಮುಂದಾಗುವ ಜನರು ಕೂಡ ಕಂಗಾಲಾಗ್ತಾರೆ. ಹಾಗಾಗಿಯೇ ಯುವಕನೊಬ್ಬ ಕಾರು ಖರೀದಿ ಮಾಡಿ ಲಂಡನ್ ನಿಂದ ಬ್ರಿಸ್ಟಲ್ ಗೆ ಕಾರಿನಲ್ಲೇ ಪ್ರಯಾಣಿಸಿದ್ದಾನೆ.

ಅದಕ್ಕೆ ತಗುಲಿರುವ ವೆಚ್ಚ ರೈಲು ಟಿಕೆಟ್ ದರಕ್ಕಿಂತಲೂ ಕಡಿಮೆ ಅನ್ನೋದೇ ವಿಶೇಷ. ಟಾಮ್ ಚರ್ಚ್ ಎಂಬಾತ ಬ್ರಿಸ್ಟಲ್ ನಲ್ಲಿರೋ ಸ್ನೇಹಿತನನ್ನು ಭೇಟಿ ಮಾಡಲು ಹೊರಟಿದ್ದ. ರೈಲಿನಲ್ಲಿ ಹೋಗೋಣ ಎಂದ್ಕೊಂಡು ಟಿಕೆಟ್ ಬಗ್ಗೆ ವಿಚಾರಿಸಿದ್ದಾನೆ.

ರೈಲು ಟಿಕೆಟ್ ದರ 210-218 ಪೌಂಡ್ ಇತ್ತು. ಬೆಲೆ ಕೇಳಿ ದಂಗಾದ ಟಾಮ್, 80 ಪೌಂಡ್ ಕೊಟ್ಟು ಸೆಕೆಂಡ್ ಹ್ಯಾಂಡ್ ಹೋಂಡಾ ಸಿವಿಕ್ ಕಾರು ಖರೀದಿಸಿದ. 81.38 ಪೌಂಡ್ ರಸ್ತೆ ತೆರಿಗೆ ಭರಿಸಿದ್ದಾನೆ. ಒಂದು ದಿನದ ಇನ್ಷೂರೆನ್ಸ್ ಗೆ 20.43 ಪೌಂಡ್ ಖರ್ಚಾಗಿದೆ. 25 ಪೌಂಡ್ ಕೊಟ್ಟು ಪೆಟ್ರೋಲ್ ಹಾಕಿಸಿದ್ದಾನೆ.

ಆತನಿಗೆ ಲಂಡನ್ ನಿಂದ ಬ್ರಿಸ್ಟಲ್ ಗೆ ತೆರಳಲು ಖರ್ಚಾಗಿದ್ದು ಕೇವಲ 206. 81 ಪೌಂಡ್ ಹಣ. ಇದು ರೈಲ್ವೆ ಟಿಕೆಟ್ ದರಕ್ಕಿಂತ್ಲೂ ಕಡಿಮೆ. ಸಾರ್ವಜನಿಕ ಸಾರಿಗೆ ಕೂಡ ಎಷ್ಟು ದುಬಾರಿಯಾಗ್ತಿದೆ ಅನ್ನೋದಕ್ಕೆ ಇದೇ ಸಾಕ್ಷಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...