alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಗೆ ಅಡ್ಡಿಯಾಗದ ಪ್ರವಾಹ: ನೀರು ತುಂಬಿದ್ದ ಚರ್ಚ್‌ನಲ್ಲೇ ವಿವಾಹ

ಫಿಲಿಫೈನ್ಸ್‌ನ ಚರ್ಚ್‌ ಒಂದರಲ್ಲಿ ನಡೆದ ಮದುವೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಭಾರಿ ಮಳೆಯಿಂದ ಚರ್ಚ್‌ನಲ್ಲಿ ನೀರು ತುಂಬಿದ್ದರೂ, ವಧು ವರರು ಉಂಗುರ ಬದಲಿಸಿ, ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಬಿಳಿ ಗೌನ್‌ ತೊಟ್ಟು ರೆಡ್‌ ಕಾರ್ಪೆಟ್‌ ಮೇಲೆ ನಡೆದು ಬರಬೇಕಿದ್ದ ವಧು-ವರರು, ಚರ್ಚ್‌ ಒಳಗೆ ಮಳೆ ನೀರಿನಿಂದ ತುಂಬಿದ್ದ ನೆಲದಲ್ಲಿ ನಡೆದು ಬಂದು ವಿವಾಹವಾಗಿದ್ದಾರೆ. ಮೊಳಕಾಲಿನವರೆಗೆ ತುಂಬಿದ್ದ ನೀರಿನಲ್ಲಿ ಬಿಳಿ ಬಣ್ಣದ ಉಡುಗೆಯನ್ನೂ ಲೆಕ್ಕಿಸದೆ ಮದುವೆ ಮಾಡಿಕೊಂಡ ಅಪರೂಪದ ಸನ್ನಿವೇಶಕ್ಕೆ ಅನೇಕರು ಸಾಕ್ಷಿಗಳಾಗಿದ್ದಾರೆ.

24 ವರ್ಷದ ಜೊಬೆಲ್‌ ಡಿಲೋಸ್‌ ಏಂಜಲ್ಸ್ , ಸ್ಟೋರ್ಮ್‌ ರನ್ನು ಭಾರಿ ಮಳೆಗೆ ಉಂಟಾದ ಪ್ರವಾಹ ಪರಿಸ್ಥಿತಿಯ ನಡುವೆಯೂ ವರಿಸಿ, ಸುದ್ದಿಯಾಗಿದ್ದಾರೆ. ಪ್ರವಾಹ, ಮಳೆ ನೀರು ನುಗ್ಗಿರುವ ಕಾರಣಕ್ಕೆ ಸುಂದರ ದಿನವನ್ನು ಮುಂದಕ್ಕೆ ಹಾಕುವುದಕ್ಕೆ ಸಿದ್ಧವಾಗಿಲ್ಲ. ನಾನು ನನ್ನ ಪ್ರೀತಿಯನ್ನು ಪಡೆಯಲು ಹೋಗುತ್ತಿದ್ದೇನೆ. ಇದಕ್ಕೆ ಮಳೆ ಅಡ್ಡಿಯಾಗದು ಎಂದ ವಧು, ನೀರು ತುಂಬಿದ್ದ ಚರ್ಚ್‌ಗೆ ಧಾವಿಸಿ, ವಿವಾಹವಾಗಿದ್ದಾಳೆ.

ವಿವಾಹಕ್ಕೆ ಬರಲು ನಮಗೆ ಕಾರಿನ ಅವಶ್ಯಕತೆ ಇರಲಿಲ್ಲ. ಬದಲಾಗಿ ಪ್ರವಾಹ ಬಂದಿದ್ದರಿಂದ ಬೋಟ್‌ನಲ್ಲೇ ಬಂದೆವು ಎಂದು ಡಿಲೋಸ್‌ ಏಂಜಲ್ಸ್ ಅನುಭವ ಹಂಚಿಕೊಂಡರು. ಈ ಎಲ್ಲ ಪ್ರಹಸನದ ವಿಡಿಯೋ ಮಾಡಿದ್ದ ಸಂಬಂಧಿಕರು, ಸಾಮಾಜಿಕ ತಾಣಕ್ಕೆ ಹಾಕಿದ್ದರು. ಇದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...