alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ನೇಹಿತೆಯರ ಜೊತೆ ಸಾರ್ವಜನಿಕ ಸಾರಿಗೆ ಏರಿದ ವಧು

4009a99500000578-4481560-image-a-20_1494151161286

34 ವರ್ಷದ ಮೇರಿ ಕಾಮ್  ಸ್ನೇಹಿತೆಯರ ಮಧ್ಯೆ ಅತಿ ಕಡಿಮೆ ಖರ್ಚು ಮಾಡುವ ಗೆಳತಿ ಎಂದೇ ಗುರುತಿಸಿಕೊಂಡಿದ್ದಾಳೆ. ಮದುವೆಯಲ್ಲಿ ಸಾಮಾನ್ಯವಾಗಿ ಎಲ್ಲರೂ ಖರ್ಚು ಮಾಡ್ತಾರೆ. ಕೆಲವರು ಮಿತಿ ಮೀರಿ ಖರ್ಚು ಮಾಡ್ತಾರೆ. ಮೇರಿ ಕೂಡ ಮದುವೆ ವೇಳೆಯಾದ್ರೂ ಪರ್ಸ್ ನಲ್ಲಿರುವ ಹಣ ತೆಗೆಯುತ್ತಾಳೆ ಎಂದುಕೊಂಡಿದ್ದರು ಸ್ನೇಹಿತೆಯರು. ಆದ್ರೆ ಅವರು ಅಂದುಕೊಂಡಂತೆ ಆಗ್ಲೇ ಇಲ್ಲ.

ಮೇರಿ ಸ್ನೇಹಿತೆಯರ ಜೊತೆ ಕಾರ್ ನಲ್ಲಿ ಮದುವೆಗೆ ಬರಲಿಲ್ಲ. ಯುಕೆಯ ಸಾರ್ವಜನಿಕ ಸಾರಿಗೆ ಏರಿದ ಮೇರಿ 13 ಸ್ನೇಹಿತೆಯರನ್ನು ಕರೆದುಕೊಂಡು ಮದುವೆ ಮನೆಗೆ ಬಂದಿದ್ದಾಳೆ. ಸಾರ್ವಜನಿಕ ಸಾರಿಗೆ ವಾಹನದಲ್ಲಿ ಸಂಚಾರ ಮಾಡಿದ್ದರಿಂದ ಪ್ರತಿಯೊಬ್ಬರಿಗೂ 2.20 ಡಾಲರ್ ಖರ್ಚು ಬಂದಿದೆ. ಹಾಗೆ ಇಪ್ಪತ್ತು ನಿಮಿಷದಲ್ಲಿ  ನಾಟಿಂಗ್ಹ್ಯಾಮ್ ತಲುಪಿದ್ದಾರೆ. ಅಲ್ಲಿಂದ ಕಾಲ್ನಡಿಗೆಯಲ್ಲಿ ಮದುವೆ ನಡೆಯುವ ಹಾಲ್ ತಲುಪಿದ್ದಾಳೆ ಮೇರಿ.

ಮೇರಿ ವಧುವಿನ ಉಡುಗೆಯಲ್ಲಿ  ಸಾರ್ವಜನಿಕ ಸಾರಿಗೆ ಏರ್ತಾ ಇದ್ದಂತೆ ಎಲ್ಲರೂ ಆಶ್ಚರ್ಯದಿಂದ ಆಕೆಯನ್ನು ನೋಡ್ತಾ ಇದ್ದರು. ಪ್ರತಿದಿನ ಇದೇ ಸಾರಿಗೆಯಲ್ಲಿ ಸಂಚಾರ ಮಾಡ್ತಾಳೆ ಮೇರಿ. ಮದುವೆಯ ದಿನವೂ ಯಾಕೆ ಇದನ್ನು ಉಪಯೋಗಿಸಬಾರದು ಎಂಬ ಆಲೋಚನೆ ಬಂದಿದೆ ಮೇರಿಗೆ. ಈ ಬಗ್ಗೆ ತಂದೆ ಹಾಗೂ ವರ ಸೈಮನ್ ಗೆ ಹೇಳಿದ್ದಾಳೆ. ಅವರಿಬ್ಬರೂ ಒಪ್ಪಿಗೆ ನೀಡಿದ್ದರಿಂದ ಎಲ್ಲರಿಗೂ ಮಾದರಿಯಾಗಿದ್ದಾಳೆ ಮೇರಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...