alex Certify
ಕನ್ನಡ ದುನಿಯಾ       Mobile App
       

Kannada Duniya

ಅಪರಿಚಿತನಿಂದ ಬಂದಿದ್ದ ಸಂದೇಶ ಕಂಡು ಬೆರಗಾದ್ಲು ವಧು

ಕ್ಯಾಸಂಡ್ರಾ ವಾರೆನ್ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ಲು. 200 ಅತಿಥಿಗಳಿಗೆ ಕರೆಯೋಲೆ ನೀಡಬೇಕು ಅನ್ನೋ ಗಡಿಬಿಡಿ. ಒರೆಗಾನ್ ನ ಯುಜೀನ್ ನಲ್ಲಿ ನೆಲೆಸಿರುವ ತನ್ನ ಚಿಕ್ಕಪ್ಪ- ಚಿಕ್ಕಮ್ಮನಿಗೂ ಕ್ಯಾಸಂಡ್ರಾ ಆಹ್ವಾನ ಪತ್ರಿಕೆ ಕಳಿಸಿದ್ದಾಳೆ.

ಆದ್ರೆ ಆತುರದಲ್ಲಿ ವಿಳಾಸ ತಪ್ಪಾಗಿ ಬರೆದಿದ್ಲು. ಹಾಗಾಗಿ ಮದುವೆಯ ಕರೆಯೋಲೆ ವಾಪಸ್ ಬಂದಿದೆ. ಅದರ ಜೊತೆಗೆ ಚಿಕ್ಕದೊಂದು ನೋಟ್ ಕೂಡ ಇತ್ತು. ಮದುವೆಯ ಶುಭಾಶಯ ಹೇಳಿದ್ದ ಅಪರಿಚಿತ ವ್ಯಕ್ತಿ, ನೂರು ಕಾಲ ಸುಖವಾಗಿ ಬಾಳುವಂತೆ ಹರಸಿದ್ದ. ತನಗೆ ಮದುವೆಯಾಗಿ 40 ವರ್ಷಗಳೇ ಕಳೆದಿವೆ, ಹಳೆಯ ನೆನಪುಗಳು ಈಗಲೂ ಮಧುರ ಅಂತಾ ಬರೆದಿದ್ದ.

ನವದಂಪತಿಗೆ ರೆಸ್ಟೋರೆಂಟ್ ನಲ್ಲಿ ಊಟ ಮಾಡುವಂತೆ 20 ಡಾಲರ್ ಹಣ ಕೂಡ ಕಳಿಸಿದ್ದ. ಜೆಸ್ಸೆ ಜೋನ್ಸ್ ಹಾಗೂ ಕ್ಯಾಸಂಡ್ರಾ ವಾರೆನ್ ಖುಷಿಖುಷಿಯಾಗಿ ಆ ಹಣದಲ್ಲಿ ಭೋಜನ ಮಾಡಿ ಬಂದಿದ್ದಾರೆ. ಪತ್ರ ಓದಿದ ಕ್ಯಾಸಂಡ್ರಾ ಅಂತೂ ಭಾವೋದ್ವೇಗಕ್ಕೆ ಒಳಗಾಗಿದ್ಲು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...