alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಾಯಕ್ಕಾಗಿ ಕರೆದವಳನ್ನು ಕೊಂದೇ ಬಿಟ್ಟರು ಪೊಲೀಸರು!

justine-damond-facebook_650x400_51500289375

ಆಸ್ಟ್ರೇಲಿಯಾದ ಮಿನ್ನೆಪೊಲಿಸ್ ನಲ್ಲಿ ಯೋಗ ಶಿಕ್ಷಕಿಯನ್ನು ಪೊಲೀಸರು ಗುಂಡಿಟ್ಟು ಕೊಂದಿದ್ದಾರೆ. 40 ವರ್ಷದ ಜಸ್ಟಿನ್ ಡೇಮಂಡ್ ಮೃತ ದುರ್ದೈವಿ, ಮುಂದಿನ ತಿಂಗಳು ಅವಳ ಮದುವೆ ಕೂಡ ನಿಶ್ಚಯವಾಗಿತ್ತು. ಶನಿವಾರ ರಾತ್ರಿ 11.30ರ ವೇಳೆಗೆ ಜಸ್ಟಿನ್ ಮನೆಯ ಹಿಂಬದಿ ಓಣಿಯಲ್ಲಿ ಜಗಳ ಶುರುವಾಗಿತ್ತು.

ಇದನ್ನು ಗಮನಿಸಿ 911ಗೆ ಕರೆ ಮಾಡಿದ್ದ ಜಸ್ಟಿನ್, ಪೊಲೀಸರ ಸಹಾಯ ಕೇಳಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಅಲ್ಲೇನ್ ನಡೀತಿದೆ ಅಂತಾ ಅರ್ಥ ಮಾಡಿಕೊಂಡು ಪರಿಸ್ಥಿತಿ ಹತೋಟಿಗೆ ತರುವುದು ಬಿಟ್ಟು ಮಹಿಳೆಯ ಕಡೆಗೆ ಕತ್ತಲಲ್ಲೇ ಗುಂಡು ಹಾರಿಸಿದ್ದಾರೆ. ಜಸ್ಟಿನ್ ಡೇಮಂಡ್ ಅಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.

ಮಾಧ್ಯಮದವರು ಬರುವಷ್ಟರಲ್ಲಿ ಪೊಲೀಸರು ಸ್ಥಳದಿಂದ ಹೊರಟೇ ಹೋಗಿದ್ರು. ಈ ಘಟನೆ ನಡೆದ ಸಂದರ್ಭದಲ್ಲಿ ಜಸ್ಟಿನ್ ಳ ಭಾವಿಪತಿ ಡಾನ್ ಡೇಮಂಡ್ ಬ್ಯುಸಿನೆಸ್ ಟ್ರಿಪ್ ಗೆ ಹೋಗಿದ್ದ. ಅದ್ಭುತ ವ್ಯಕ್ತಿತ್ವ ಹಾಗೂ ಪರೋಪಕಾರಿ ಗುಣ ಹೊಂದಿದ್ದ ಜಸ್ಟಿನ್ ಡೇಮಂಡ್ ಳ ದುರಂತ ಸಾವಿನ ಬಗ್ಗೆ ನೆರೆಹೊರೆಯವರು ಕೂಡ ಆಘಾತ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...