alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ರಾತ್ರಿಯೇ ವಧು ಮಾಡಿದ್ಲು ಇಂತಹ ಕೆಲ್ಸ

vadu-us-d-gun

ಈ ದಂಪತಿಯ ಮಧುಚಂದ್ರವೇ ಮುರಿದು ಬಿದ್ದಿದೆ. ಮದುವೆಯ ದಿನವೇ ನಡೆಯಬಾರದ ಘಟನೆ ನಡೆದಿದೆ.

ಮದುವೆಯಾದ ಕೆಲ ಹೊತ್ತಿನಲ್ಲೇ ಮದುಮಗಳು ವರನ ಹಣೆಗೆ ಗನ್ ಹಿಡಿದಿದ್ದು, ಬೆಚ್ಚಿ ಬಿದ್ದ ವರ ಮಹಾಶಯ ಸಂಬಂಧವನ್ನೇ ಕಡಿದುಕೊಂಡಿದ್ದಾನೆ.

ಅಮೆರಿಕದ ಟೆನ್ನೀಸ್ಸೇಯಲ್ಲಿ ವಧು ಕೇಟ್ ಪ್ರಿಚರ್ಡ್(25) ಮದುವೆ ನಡೆದಿದೆ. ಬಂಧು, ಬಾಂಧವರೆಲ್ಲರ ಸಮ್ಮುಖದಲ್ಲಿ ಮದುವೆ ಸಮಾರಂಭ ಮುಕ್ತಾಯವಾಗಿದೆ.

ಅದೇ ದಿನ ಮೊದಲ ರಾತ್ರಿಗೂ ಮೊದಲು ಪಾರ್ಟಿ ಆಯೋಜಿಸಲಾಗಿದೆ. ಅದೇನಾಯ್ತೋ ಏನೋ ಪಾರ್ಟಿಯಲ್ಲೇ ನವದಂಪತಿ ನಡುವೆ ಜಗಳವಾಗಿದೆ.

ಕೇಟ್ ತನ್ನ ಗೌನ್ ನಲ್ಲಿದ್ದ 9 ಎಂ.ಎಂ. ಪಿಸ್ತೂಲ್ ತೆಗೆದು ಗಂಡನ ಹಣೆಗೆ ಇಟ್ಟು ಟ್ರಿಗರ್ ಒತ್ತಿದ್ದಾಳೆ. ಆದರೆ, ಅದೃಷ್ಟವಶಾತ್ ಗುಂಡು ಹಾರಿಲ್ಲವಾದ್ದರಿಂದ ವರ ಪಾರಾಗಿದ್ದಾನೆ. ಮೊದಲ ರಾತ್ರಿ ರದ್ದಾಗಿ ಆಕೆಯನ್ನು ಜೈಲಿಗೆ ಕಳಿಸಲಾಗಿದೆ. ವರ ಆಕೆಯ ಸಹವಾಸವೇ ಬೇಡ ಎಂದು ಹೇಳಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...