alex Certify
ಕನ್ನಡ ದುನಿಯಾ       Mobile App
       

Kannada Duniya

ವಧುವಾಗುವ ಮುನ್ನ ಹುಡುಗಿ ಜೊತೆ ನಡೆಯುತ್ತೆ ಇಂಥ ಕೃತ್ಯ

ಜಗತ್ತಿನ ಅನೇಕ ದೇಶಗಳಲ್ಲಿ ಮಹಿಳೆಗೆ ಸಮಾನತೆ ನೀಡಲು ಅನೇಕ ಪ್ರತಿಭಟನೆ, ಹೋರಾಟ ನಡೆಯುತ್ತಿದೆ. ಆದ್ರೆ ಮಹಿಳೆ ದೌರ್ಜನ್ಯ, ಹಿಂಸೆ ಮಾತ್ರ ಇನ್ನೂ ನಿಂತಿಲ್ಲ. ಪ್ರೇಮಿಗಳು ಅಪಹರಣದ ನಾಟಕವಾಡಿ ಮದುವೆಯಾದ ಘಟನೆಗಳು ವರದಿಯಾಗ್ತಿರುತ್ತವೆ. ಆದ್ರೆ ಮದುವೆಗಾಗಿ ಅಪಹರಣ ಮಾಡುವ ಸಂಪ್ರದಾಯವೊಂದು ಈ ದೇಶದಲ್ಲಿದೆ.

ಕಿರ್ಗಿಸ್ತಾನ್ ನಲ್ಲಿ ಹುಡುಗಿ ಮೇಲೆ ಉದ್ದೇಶಪೂರ್ವಕವಾಗಿ ಅಪಹರಣ, ಅತ್ಯಾಚಾರಗಳು ನಡೆಯುತ್ತವೆ. ಹುಡುಗಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ನಂತ್ರ ಆಕೆಯನ್ನು ಬಿಡಲಾಗುತ್ತದೆ. ಮನೆಗೆ ಬಂದ ಹುಡುಗಿ ಜೀವನ ಅಲ್ಲಿಂದ ನರಕವಾಗುತ್ತದೆ. ಅತ್ಯಾಚಾರಕ್ಕೊಳಗಾದ ಹುಡುಗಿಯನ್ನು ಯಾರೂ ಮದುವೆಯಾಗಲು ಬರುವುದಿಲ್ಲ. ಆಗ ತಂದೆ-ತಾಯಿ ಅನಿವಾರ್ಯವಾಗಿ ಅಪಹರಣ ಮಾಡಿದ ವ್ಯಕ್ತಿ ಜೊತೆ ಮಗಳನ್ನು ಮದುವೆ ಮಾಡಲು ಮುಂದಾಗ್ತಾರೆ.

ಮದುವೆಗಾಗಿಯೇ ಅಪಹರಣ ನಡೆಸಲಾಗುತ್ತದೆ. ಕಿರ್ಗಿಸ್ತಾನ್ ನಲ್ಲಿ ಇದೊಂದು ಸಂಪ್ರದಾಯದಂತಾಗಿದೆ. ಮದುವೆಯಾಗದ ಹುಡುಗ್ರು ಹುಡುಗಿಯನ್ನು ಅಪಹರಿಸಿ ನಂತ್ರ ಬಿಡ್ತಾರೆ. ಕಿರ್ಗಿಸ್ತಾನ್ ನಲ್ಲೊಂದೇ ಅಲ್ಲ ವಿಶ್ವದ ಇನ್ನೂ ಅನೇಕ ಕಡೆ ಇಂಥ ಪ್ರಕರಣ ಬೆಳಕಿಗೆ ಬರ್ತಿದೆ. ಇದ್ರ ವಿರುದ್ಧ ಕಿರ್ಗಿಸ್ತಾನದಲ್ಲಿ ಅನೇಕ ಹೋರಾಟಗಳು ನಡೆಯುತ್ತಿವೆ. ಹೊಸ ಕಾನೂನು ಜಾರಿಗೆ ಬರುವ ಸಾಧ್ಯತೆಯಿದೆ. ಆದ್ರೆ ಸಂಪ್ರದಾಯದ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ಎಂದೂ ನಿಲ್ಲುವುದಿಲ್ಲ ಎನ್ನುತ್ತಿದ್ದಾರೆ ಜನರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...