alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಮತದ ಸೆಕ್ಸ್ ಮಾಡಿದ್ರೂ ಯುವಕನಿಗಾಗಿದೆ ಶಿಕ್ಷೆ, ಕಾರಣ ಗೊತ್ತಾ?

ಒಮ್ಮತದ ಸೆಕ್ಸ್ ನಂತರವೂ ಅಮೆರಿಕದಲ್ಲಿ ವ್ಯಕ್ತಿಯೊಬ್ಬನಿಗೆ ಶಿಕ್ಷೆಯಾಗಿದೆ. 37 ವರ್ಷದ ವೈದ್ಯಕೀಯ ಪದವೀಧರ ಫಿಲಿಪ್ ಕ್ವಿರಿ ತಪ್ಪಿತಸ್ಥ ಅಂತಾ ಕೋರ್ಟ್ ತೀರ್ಪು ನೀಡಿದೆ. ಫಿಲಿಪ್ ಯುವತಿಯೊಬ್ಬಳ ಜೊತೆಗೆ ಡೇಟಿಂಗ್ ಗೆ ಹೋಗಿದ್ದ. ಈ ಟಿಂಡರ್ ಡೇಟ್ ಅವನನ್ನು ಕಟಕಟೆಯಲ್ಲಿ ನಿಲ್ಲಿಸಿದೆ.

ಆ ಯುವತಿ ಹಾಗೂ ಫಿಲಿಪ್ ಒಮ್ಮತದ ಮೇರೆಗೆ ಲೈಂಗಿಕ ಸಂಬಂಧ ಹೊಂದಿದ್ದರು. ಆದ್ರೆ ಈ ವೇಳೆ ಫಿಲಿಪ್ ತನ್ನ ಸ್ತನಗಳ ಮೇಲೆ ದಾಳಿ ಮಾಡಿದ್ದಾನೆ ಅನ್ನೋದು ಯುವತಿಯ ಆರೋಪ. ನೋವು ತಡೆಯಲಾಗದೇ ಆಕೆ ಕಣ್ಣೀರು ಹಾಕಿದ್ದಳಂತೆ.

ಕೊನೆಗೆ ಈ ಘಟನೆ ಬಗ್ಗೆ ಫಿಲಿಪ್ ವಿರುದ್ಧ ಕೋರ್ಟ್ ನಲ್ಲಿ ಯುವತಿ ದಾವೆ ಹೂಡಿದ್ದಳು. ಫಿಲಿಪ್ ಅಸಭ್ಯ ದಾಳಿ ಮಾಡಿರೋದು ನಿಜ ಅಂತಾ ಕೋರ್ಟ್ ಕೂಡ ಅಭಿಪ್ರಾಯಪಟ್ಟಿದೆ. ಆ ತಪ್ಪಿಗೆ ಶಿಕ್ಷೆಯಾಗಿ ಇನ್ನು 5 ವರ್ಷಗಳ ಕಾಲ ಫಿಲಿಪ್ ಯುವತಿಯನ್ನು ಭೇಟಿ ಮಾಡುವಂತಿಲ್ಲ.

180 ಗಂಟೆಗಳ ಕಾಲ ಸಮಾಜ ಸೇವೆ ಮಾಡಬೇಕು. ಜೊತೆಗೆ 2000 ಡಾಲರ್ ದಂಡ ಕಟ್ಟಬೇಕು. ಈಗಷ್ಟೇ ವೈದ್ಯಕೀಯ ಪದವಿ ಮುಗಿಸಿರೋ ಫಿಲಿಪ್ ವೃತ್ತಿ ಜೀವನಕ್ಕೆ ಇದರಿಂದ ಹೊಡೆತ ಬೀಳಲಿದೆ. ಹಾಗಾಗಿ ಶಿಕ್ಷೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಆತ ಮುಂದಾಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...