alex Certify
ಕನ್ನಡ ದುನಿಯಾ       Mobile App
       

Kannada Duniya

ಸಾರ್ವಜನಿಕ ಪ್ರದೇಶದಲ್ಲಿ ಸ್ತನಪಾನ ಮಾಡಿಸ್ತಿದ್ದ ಮಹಿಳೆ ನೀಡಿದ್ಲು ಇಂಥ ಉತ್ತರ

ತಾಯಿಯ ಎದೆ ಹಾಲು ಬಹಳ ಒಳ್ಳೆಯದು. ಆರು ತಿಂಗಳುಗಳ ಕಾಲ ಮಗುವಿಗೆ ತಾಯಿ ಎದೆ ಹಾಲು ಅಮೃತವಿದ್ದಂತೆ ಎಂದು ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಹಾಗಂತ ತಾಯಿಯಾದವಳು ಎಲ್ಲರ ಮುಂದೆ ಸ್ತನಪಾನ ಮಾಡಿಸ್ತಿದ್ದರೆ ಅದನ್ನು ಜನರು ವಿರೋಧ ಮಾಡ್ತಾರೆ. ರೆಸ್ಟೋರೆಂಟ್ ಒಂದರಲ್ಲಿ ಸಾರ್ವಜನಿಕವಾಗಿ ಸ್ತನಪಾನ ಮಾಡಿಸ್ತಿದ್ದ ಮಹಿಳೆಯನ್ನು ವಿರೋಧಿಸಿದ ಪುರುಷನಿಗೆ ತಾಯಿಯಾದವಳು ಸರಿಯಾದ ಉತ್ತರ ನೀಡಿದ್ದಾಳೆ.

ಘಟನೆ ಮೆಕ್ಸಿಕೊದ ಕಾಬೊ ಸ್ಯಾನ್ ಲ್ಯೂಕಾಸ್ ನಗರದಲ್ಲಿ ನಡೆದಿದೆ. ಇಲ್ಲಿದ ರೆಸ್ಟೋರೆಂಟ್ ಒಂದರಲ್ಲಿ ತಾಯಿಯೊಬ್ಬಳು 6 ತಿಂಗಳ ಮಗುವಿಗೆ ಸ್ತನಪಾನ ಮಾಡಿಸ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಸ್ತನ ಮುಚ್ಚಿಕೊಳ್ಳುವಂತೆ ಸಲಹೆ ನೀಡಿದ್ದಾನೆ. ಮಹಿಳೆ ಈತನಿಗೆ ಸರಿಯಾಗಿ ಉತ್ತರ ನೀಡಿದ್ದಾಳೆ. ಸ್ತನ ಮುಚ್ಚಿಕೊಳ್ಳುವ ಬದಲು ತನ್ನ ಮುಖ ಮುಚ್ಚಿಕೊಂಡಿದ್ದಾಳೆ. ಆಕೆ ಸ್ನೇಹಿತರೊಬ್ಬರು ಈ ದೃಶ್ಯದ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ.

ಸಾರ್ವಜನಿಕ ಪ್ರದೇಶದಲ್ಲಿ ಸ್ತನಪಾನ ಮಾಡಿಸುವುದನ್ನು ವಿರೋಧಿಸುವ ವ್ಯಕ್ತಿಗಳಿಗೆ ತಕ್ಕ ಉತ್ತರ ನೀಡಿದ ಮಹಿಳೆ ಎಂದು ಘಟನೆಯನ್ನು ವಿವರಿಸಿದ್ದಾರೆ. ಈ ಫೋಟೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಮಹಿಳೆ ದಿಟ್ಟತನಕ್ಕೆ ಸಾಮಾಜಿಕ ಜಾಲತಾಣದ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...