alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ಮೆಟ್ರೋದಲ್ಲಿ ಮತ್ತೊಂದು ಸ್ಪೋಟ

ಲಂಡನ್ ಮೆಟ್ರೋದಲ್ಲಿ ಮತ್ತೊಂದು ಸ್ಪೋಟ ಸಂಭವಿಸಿದೆ. 2017 ರಲ್ಲಿ ಸಂಭವಿಸಿದ 6 ನೇ ಸ್ಪೋಟ ಪ್ರಕರಣ ಇದಾಗಿದೆ.

ಲಂಡನ್ ನ ಟವರ್ ಹಿಲ್ ಟ್ಯೂಬ್ ಸ್ಟೇಷನ್ ನಲ್ಲಿ ಭಾರೀ ಸ್ಪೋಟದ ಸದ್ದು ಕೇಳಿ ಬಂದಿದ್ದು, ರೈಲು ಹಾಗೂ ನಿಲ್ದಾಣದಲ್ಲಿದ್ದ ಪ್ರಯಾಣಿಕರೆಲ್ಲಾ ಗಾಬರಿಯಿಂದ ಓಡಿದ್ದಾರೆ. ಈ ಸಂದರ್ಭದಲ್ಲಿ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ರೈಲಿನಲ್ಲಿ ಆಸಿಡ್ ವಾಸನೆ ಬಂದಿದ್ದು, ಸ್ಪೋಟದಿಂದಾಗಿ ಕೆಲಕಾಲ ಬೆಂಕಿ ಹೊತ್ತಿ ಉರಿದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

ಮೆಟ್ರೋ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಮೊಬೈಲ್ ಬ್ಯಾಟರಿ ಸ್ಪೋಟಗೊಂಡಿರಬಹುದೆಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಇತ್ತೀಚೆಗಷ್ಟೇ ವೆಸ್ಟ್ ಲಂಡನ್ ನಲ್ಲಿರುವ ಅಂಡರ್ ಗ್ರೌಂಡ್ ಮೆಟ್ರೋ ನಿಲ್ದಾಣದಲ್ಲಿ ಸ್ಪೋಟ ಸಂಭವಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...