alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿಯನ್ನು ರಕ್ಷಿಸಲು ನದಿಗೆ ಹಾರಿದ ಬ್ರೆಜಿಲ್ ನ ಮೊದಲ ಮಹಿಳೆ…!

ಸಾಕು ಪ್ರಾಣಿಗಳು ಅಂದ್ರೆ ಎಲ್ಲರಿಗೂ ಇಷ್ಟ. ಕೆಲವರು ನಾಯಿ, ಬೆಕ್ಕುಗಳನ್ನು ತಮ್ಮ ಮನೆ ಮಕ್ಕಳಂತೆ ನೋಡಿಕೊಳ್ತಾರೆ. ಅಂತೆಯೆ ಬ್ರೆಜಿಲ್ ನ ಮೊದಲ ಮಹಿಳೆ ಮರ್ಸೆಲಾ ಟೆಂಮರ್ ತನ್ನ ನಾಯಿಯನ್ನು ರಕ್ಷಿಸಲು ತಾನು ಧರಿಸಿದ್ದ ಉಡುಗೆಯಲ್ಲಿ ನದಿಗೆ ಜಿಗಿದು ಭಾರಿ ಸುದ್ದಿಯಾಗಿದ್ದಾಳೆ.

ಮಾಜಿ ಸುಂದರಿಯಾದ 34 ವರ್ಷದ ಮರ್ಸೆಲಾ ತನ್ನ ನಾಯಿಗಾಗಿ ನದಿಯಲ್ಲಿ ಧುಮಕಿದ್ದು, ಬ್ರೆಜಿಲ್ ಮಾಧ್ಯಮಗಳಲ್ಲಿ ಭಾರಿ ಚರ್ಚೆಯಾಗ್ತಿದೆ. ಏಪ್ರಿಲ್ 22 ರಂದೇ ಈ ಘಟನೆ ನಡೆದಿದ್ರೂ, ಈಗ ಬೆಳಕಿಗೆ ಬಂದಿದೆ. ಸಧ್ಯ ಈಕೆ ಟ್ವಿಟರ್, ಮಾಧ್ಯಮಗಳಲ್ಲಿ ಅಪಹಾಸ್ಯಕ್ಕೀಡಾಗಿದ್ದಾಳೆ.

ಇದೇ ವಿಚಾರವನ್ನಿಟ್ಟುಕೊಂಡು ಇದೀಗ ಮರ್ಸೆಲಾ ಪತಿ, ಬ್ರೆಜಿಲ್ ಅಧ್ಯಕ್ಷ ಮೈಕಲ್ ಟೆಂಮರ್ ನನ್ನು ವಿರೋಧಿಗಳು ಬ್ಲಾಗ್ ಗಳಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ. ಇತಿಹಾಸದಲ್ಲೇ ಮೈಕಲ್ ಜನಪ್ರಿಯವಲ್ಲದ ಅಧ್ಯಕ್ಷರಾಗಿದ್ದಾರೆ. ಟೆಂಮರ್ ಜೊತೆ ಇರಲು ಇಷ್ಟಪಡದೆ ನಾಯಿ ಆತ್ಮಹತ್ಯೆ ಮಾಡಿಕೊಂಡಿದೆ ಅಂತಾ ಕುಟುಕಿದ್ದಾರೆ.

ಒಟ್ನಲ್ಲಿ ತನ್ನ ಸಾಕುಪ್ರಾಣಿಗಾಗಿ ಜೀವದ ಹಂಗು ತೊರೆದು ನದಿಗೆ ಜಿಗಿದ ಬ್ರೆಜಿಲ್ ಮೊದಲ ಮಹಿಳೆಗೆ ತನ್ನ ನಾಯಿ ಸಿಗಲಿಲ್ಲ. ಬದಲಿಗೆ ಟೀಕೆಗಳ ಸುರಿಮಳೆಯಾಗ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...