alex Certify
ಕನ್ನಡ ದುನಿಯಾ       Mobile App
       

Kannada Duniya

ಹೆರಿಗೆ ನೋವಿನಿಂದ ಬಳಲುವ ಗರ್ಭಿಣಿಯರೊಂದಿಗೆ ಡಾನ್ಸ್ ಮಾಡ್ತಾರೆ ವೈದ್ಯರು

ಡಾನ್ಸ್ ಒಂದು ಅದ್ಭುತವಾದ ಕಲೆ. ಡಾನ್ಸ್ ಮಾಡಿದ್ರೆ ದೇಹಕ್ಕೆ ಒಳ್ಳೆ ವ್ಯಾಯಾಮವೂ ಆಗುತ್ತದೆ. ಇದರ ಜೊತೆಗೆ ಮನರಂಜನೆ, ಫನ್ ಎಲ್ಲವೂ ಡಾನ್ಸ್ ನಲ್ಲಿದೆ. ಆದ್ರೆ ಡಾನ್ಸ್ ಮೂಲಕ ಹೆರಿಗೆ ನೋವು ಕಡಿಮೆ ಮಾಡೋದನ್ನು ನೀವೆಲ್ಲಾದ್ರೂ ಕೇಳಿದ್ದೀರಾ?

ಬ್ರೆಜಿಲ್ ನ ವೈದ್ಯ ಫರ್ನಾಂಡೋ ಗ್ಯೂಡೆಸ್ ಎಂಬುವವರು ಹೆರಿಗೆ ನೋವಿಗೆ ಡಾನ್ಸ್ ನಿಂದ ಉಪಶಮನ ನೀಡಬಹುದು ಅನ್ನೋದನ್ನು ಪತ್ತೆ ಮಾಡಿದ್ದಾರೆ. ಹೆರಿಗೆ ನೋವು ತಾಳಲಾರದೆ ಒದ್ದಾಡುವ ಗರ್ಭಿಣಿಯರಿಗೆಲ್ಲ ಡಾಕ್ಟರ್ ಫರ್ನಾಂಡೋ ಡಾನ್ಸ್ ಮಾಡಿಸ್ತಾರೆ.

ಹಾಗಾಗಿ ಎಲ್ಲರೂ ಇವರನ್ನು ಡಾನ್ಸಿಂಗ್ ಡಾಕ್ಟರ್ ಅಂತಾನೇ ಕರೆಯುತ್ತಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿರುವ ತುಂಬು ಗರ್ಭಿಣಿಯರೊಂದಿಗೆ ಡಾಕ್ಟರ್ ಫರ್ನಾಂಡೋ ತಾವು ಕೂಡ ಡಾನ್ಸ್ ಮಾಡ್ತಾರೆ. ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಕೂಡ ಮಾಡಿದ್ದಾರೆ.

ಈ ರೀತಿ ನರ್ತಿಸುವುದರಿಂದ ಹೆರಿಗೆ ಪ್ರಕ್ರಿಯೆ ಕೂಡ ಸುಲಭವಾಗುತ್ತದೆ. ಹೆರಿಗೆ ವೇಳೆ ಹೆಚ್ಚು ನೋವಾಗುವುದಿಲ್ಲ. ಹಿಪ್ ಮೂವ್ಮೆಂಟ್, ಶಿಮ್ಮೀಸ್, ಸ್ಕ್ವಾಟ್ಸ್ ಹೀಗೆ ವಿವಿಧ ಸ್ಟೆಪ್ ಗಳನ್ನು ವೈದ್ಯರೇ ಗರ್ಭಿಣಿಯರಿಗೆ ಹೇಳಿಕೊಡ್ತಾರೆ. ಜೊತೆಗೆ ತಾವೂ ಸ್ಟೆಪ್ ಹಾಕ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...