alex Certify
ಕನ್ನಡ ದುನಿಯಾ       Mobile App
       

Kannada Duniya

ಒಡೆಯನನ್ನು ರಕ್ಷಿಸಲು ಜೀವ ತೆತ್ತ ನಾಯಿ

ಸ್ಟೀಫನ್ ಪರಿಸಿ ತಮ್ಮ ಮುದ್ದಿನ ನಾಯಿ ಪೆಟೆ ಜೊತೆಗೆ ನ್ಯೂಜೆರ್ಸಿಯ ಮೊಂಕ್ವಿಲ್ಲೆ ಜಲಾಶಯಕ್ಕೆ ತೆರಳಿದ್ರು. ಅಲ್ಲಿ ಕರಡಿಯೊಂದು ಸ್ಟೀಫನ್ ಮೇಲೆ ದಾಳಿ ಮಾಡಿದೆ. ಆ ಪ್ರದೇಶದಲ್ಲಿ ಬಹಳಷ್ಟು ನಾಯಿಗಳಿದ್ವು.

ಆದ್ರೆ ಎಲ್ಲವೂ ತಮ್ಮ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿವೆ. ಆದ್ರೆ ಪೆಟೆ ಮಾತ್ರ ತನ್ನ ಮಾಲೀಕನ ರಕ್ಷಣೆಗೆ ಧಾವಿಸಿದೆ. ಕರಡಿಯ ಜೊತೆಗೆ ಗುದ್ದಾಡಿ ಅದನ್ನು ಅಲ್ಲಿಂದ ಓಡಿಸುವಲ್ಲಿ ಯಶಸ್ವಿಯಾಗಿದೆ.

ಆದ್ರೆ ಈ ಕಾದಾಟದಲ್ಲಿ ಶ್ವಾನ ತೀವ್ರವಾಗಿ ಗಾಯಗೊಂಡಿತ್ತು. ಸ್ಟೀಫನ್ ಮತ್ತವರ ಪತ್ನಿ ಕ್ಯಾಥಿ ನಾಯಿಯನ್ನು ಪ್ರಾಣಿಗಳ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ ನಾಯಿಯ ಬೆನ್ನುಮೂಳೆ ಮುರಿದು ಹೋಗಿತ್ತು. ದೇಹದ ತುಂಬೆಲ್ಲಾ ಗಂಭೀರವಾದ ಗಾಯಗಳಾಗಿದ್ದವು.

ಹಾಗಾಗಿ ಚಿಕಿತ್ಸೆ ಫಲಕಾರಿಯಾಗಿಲ್ಲ. ಒಡೆಯನ ರಕ್ಷಣೆಗೆ ಕರಡಿಯೊಂದಿಗೆ ಹೋರಾಡಿದ ದಿಟ್ಟ ಶ್ವಾನ ಕೊನೆಯುಸಿರೆಳೆದಿದೆ. ಈ ಬಗ್ಗೆ ಸ್ಟೀಫನ್ ಫೇಸ್ಬುಕ್ ನಲ್ಲೂ ಪೋಸ್ಟ್ ಮಾಡಿದ್ದಾರೆ. ಮುದ್ದಿನ ನಾಯಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...