alex Certify
ಕನ್ನಡ ದುನಿಯಾ       Mobile App
       

Kannada Duniya

ಇಬ್ಬರು ಖತರ್ನಾಕ್ ಬ್ರಾ ಕಳ್ಳಿಯರ ಅರೆಸ್ಟ್

ಅಮೆರಿಕದಲ್ಲಿ ಇಬ್ಬರು ಬ್ರಾ ಕಳ್ಳಿಯರು ಸಿಕ್ಕಿಬಿದ್ದಿದ್ದಾರೆ. ಅವರ ಬಳಿಯಿದ್ದ ಒಳ ಉಡುಪುಗಳ ಬೆಲೆ 11,000 ಡಾಲರ್. ಅಂದ್ರೆ ಅಂದಾಜು 7 ಲಕ್ಷ ರೂಪಾಯಿ. ತಮ್ಮನ್ನು ತಾವು ಬ್ರಾ ಡಕಾಯಿತರು ಅಂತಾನೇ ಇವರು ಕರೆದುಕೊಳ್ಳುತ್ತಿದ್ರು.

ಕ್ಯಾಲಿಫೋರ್ನಿಯಾದಲ್ಲಿ ವಿಕ್ಟೋರಿಯಾಸ್ ಸೀಕ್ರೆಟ್ ಸ್ಟೋರ್ ನಲ್ಲಿ ಬ್ರಾ ಕದಿಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.ಅಲ್ಲಿನ ಸಿಬ್ಬಂದಿಗೆ ಪೆಪ್ಪರ್ ಸ್ಪ್ರೇ ಮಾಡಿ ಪರಾರಿಯಾಗಲು ಅವರು ಯತ್ನಿಸಿದ್ದರು. ಆದ್ರೆ ಅಧಿಕಾರಿಯೊಬ್ಬರು ಈ ಕಳ್ಳಿಯರನ್ನು ಸೆರೆಹಿಡಿದಿದ್ದಾರೆ.

ಅವರ ಫೋಟೋಗಳನ್ನು ಕೂಡ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ. ಸುಮಾರು ನೂರಕ್ಕೂ ಹೆಚ್ಚು ಪ್ಯಾಡೆಡ್ ಬ್ರಾಗಳನ್ನು ಇವರು ದೊಡ್ಡ ಚೀಲದಲ್ಲಿ ತುಂಬಿಸಿಕೊಂಡಿದ್ದರು. ಅದನ್ನೆಲ್ಲ ಕಾರಿನಲ್ಲಿ ಹಾಕಿಕೊಂಡು ಎಸ್ಕೇಪ್ ಆಗುವ ಪ್ರಯತ್ನದಲ್ಲಿದ್ದಾಗ ಬಲೆಗೆ ಬಿದ್ದಿದ್ದಾರೆ. ಬ್ರಾ ಹೊರತುಪಡಿಸಿ ಬೇರೆ ಯಾವ ಬಟ್ಟೆಯನ್ನೂ ಅವರು ಕದ್ದಿರಲಿಲ್ಲ.

Alert Officer nabs two women in clothing heistFriday evening (3/9/18), just before 8pm, Folsom Police answered a call…

Posted by Folsom Police Department on Saturday, March 10, 2018

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...