alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರ್ಟ್ಸ್ ಬ್ಯಾನ್ ಮಾಡಿದ್ದಕ್ಕೆ ಸ್ಕರ್ಟ್ ತೊಟ್ಟರು…!

skirt

ಬ್ರಿಟನ್ ನಲ್ಲಿ ಈಗ ಸಿಕ್ಕಾಪಟ್ಟೆ ಸೆಖೆ. ಶಾಲಾ ಮಕ್ಕಳಿಗೆ ಯೂನಿಫಾರ್ಮ್ ಜೊತೆಗೆ ಬ್ಲೇಜರ್ ಹಾಕೋದು ಕಷ್ಟವಾಗ್ತಿದೆ. ಸ್ವಲ್ಪ ಕೂಲ್ ಆಗಿರಲಿ ಅಂತಾ ISCA ಅಕಾಡೆಮಿಯ ವಿದ್ಯಾರ್ಥಿಗಳು ಶಾರ್ಟ್ಸ್ ಧರಿಸಿ ಶಾಲೆಗೆ ಬರುವುದಾಗಿ ಹೇಳಿದ್ದಾರೆ. ಆದ್ರೆ ಶಿಕ್ಷಕರು ಅದಕ್ಕೆ ಒಪ್ಪಿಲ್ಲ.

ಶಾರ್ಟ್ಸ್ ಧರಿಸಿ ಬಂದ್ರೆ ಒಂದು ವಾರ ನಿಮ್ಮನ್ನು ತರಗತಿಗೆ ಸೇರಿಸೋದಿಲ್ಲ ಅಂತಾ ವಾರ್ನ್ ಮಾಡಿದ್ದಾರೆ. ಬೇಕಾದ್ರೆ ಸ್ಕರ್ಟ್ ಹಾಕ್ಕೊಂಡ್ ಬನ್ನಿ, ನೋ ಪ್ರಾಬ್ಲೆಮ್ ಅಂತಾ ಜೋಕ್ ಮಾಡಿದ್ದಾರೆ. ಇದ್ರಿಂದ ವಿದ್ಯಾರ್ಥಿಗಳ ಪಿತ್ತ ನೆತ್ತಿಗೇರಿತ್ತು.

ಶಾರ್ಟ್ಸ್ ಧರಿಸಲು ಅವಕಾಶ ಕೊಡದ ಶಿಕ್ಷಕಿ ವಿರುದ್ಧ ಪ್ರತಿಭಟಿಸಲು ಐವರು ಹುಡುಗರು ಸ್ಕರ್ಟ್ ಹಾಕಿಕೊಂಡು ಶಾಲೆಗೆ ಬಂದಿದ್ದಾರೆ. ಇನ್ನೂ 50 ವಿದ್ಯಾರ್ಥಿಗಳು ಕೂಡ ಸ್ಕರ್ಟ್ ತೊಟ್ಟು ಬರಲು ನಿರ್ಧರಿಸಿದ್ದಾರಂತೆ. ಸದ್ಯ ಬ್ರಿಟನ್ ನಲ್ಲಿ 30 ಡಿಗ್ರಿ ಉಷ್ಣಾಂಶವಿದೆಯಂತೆ.

ಈ ಸೆಕೆಯಲ್ಲಿ ಮಕ್ಕಳು ಪ್ಯಾಂಟ್ ಧರಿಸಿ ಬರೋದು ಕಷ್ಟ, ಹಾಗಾಗಿ ಶಾರ್ಟ್ಸ್ ಹಾಕಲು ಅವಕಾಶ ಕೊಡಬೇಕು ಅನ್ನೋದು ಪೋಷಕರ ವಾದ. ಆದ್ರೆ ಶಾಲೆಯ ಸಮವಸ್ತ್ರ ನಿಯಮದ ಪ್ರಕಾರ ಶಾರ್ಟ್ಸ್ ಧರಿಸುವಂತಿಲ್ಲ ಅಂತಾ ಶಿಕ್ಷಕರು ಹೇಳಿಬಿಟ್ಟಿದ್ದಾರೆ. ಆದ್ರೀಗ ಗಂಡು ಮಕ್ಕಳು ಸ್ಕರ್ಟ್ ತೊಟ್ಟಿರೋದ್ರಿಂದ ಶಿಕ್ಷಕರು ತಮ್ಮ ನಿರ್ಧಾರ ಬದಲಿಸ್ತಾರಾ ಅನ್ನೋದನ್ನು ಕಾದು ನೋಡ್ಬೇಕು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...