alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಸುತ್ತಾಡಿಸಿ ವಿಡಿಯೋ ಮಾಡಿದ್ದ

ನ್ಯೂಯಾರ್ಕ್ ಕೋರ್ಟ್ 26 ವರ್ಷದ ಜೆಸನ್ ಮೆಲ್ಲೊನನ್ನು ದೋಷಿ ಎಂದು ತೀರ್ಪಿತ್ತಿದೆ. ಜೆಸನ್ ಮೆಲ್ಲೊ ತನ್ನ ಗೆಳತಿಯ ಬಟ್ಟೆ ಬಿಚ್ಚಿ ರಸ್ತೆಯಲ್ಲಿ ಸುತ್ತಾಡಿಸಿದ್ದ. ಆಕೆ ಇನ್ನೊಬ್ಬ ಹುಡುಗನ ಜೊತೆ ಸಂಬಂಧ ಹೊಂದಿದ್ದಳು ಎನ್ನುವ ಶಂಕೆ ವ್ಯಕ್ತಪಡಿಸಿದ್ದ ಜೆಸನ್ ಕೆಟ್ಟದಾಗಿ ನಡೆದುಕೊಂಡಿದ್ದ.

ಗೆಳತಿ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಆಕೆಯನ್ನು ರಸ್ತೆಯಲ್ಲಿ ಬೆತ್ತಲಾಗಿ ಸುತ್ತಿಸಿದ್ದ. ಜೊತೆಗೆ ರಸ್ತೆಯಲ್ಲಿ ಆಕೆ ನಗ್ನಳಾಗಿ ತಿರುಗಾಡುತ್ತಿದ್ದ ದೃಶ್ಯವನ್ನು ವಿಡಿಯೋ ಮಾಡಿದ್ದ. ತನ್ನೆಲ್ಲ ಸ್ನೇಹಿತರಿಗೆ ಈ ವಿಡಿಯೋ ಕಳುಹಿಸಿದ್ದ ಜೆಸನ್. ನ್ಯೂಯಾರ್ಕ್ ನಲ್ಲಿ ಚರ್ಚೆಗೆ ಕಾರಣವಾಗಿದ್ದ ಈ ಘಟನೆ ಹಿಂದಿನ ವರ್ಷ ನಡೆದಿತ್ತು.

2016 ಜನವರಿಯಲ್ಲಿ ಜೆಸನ್ ವಿರುದ್ಧ ಆತನ ಗೆಳತಿ ದೂರು ದಾಖಲಿಸಿದ್ದಳು. ಫೋನ್ ನಲ್ಲಿ ಮಾತನಾಡುತ್ತಿರುವ ವ್ಯಕ್ತಿ ಕೇವಲ ಸ್ನೇಹಿತ ಎಂದು ಜೆಸನ್ ಗರ್ಲ್ಫ್ರೆಂಡ್ ಹೇಳಿದ್ದಳು. ಆದ್ರೆ ಅದನ್ನು ಒಪ್ಪಿಕೊಳ್ಳಲು ಜೆಸನ್ ಸಿದ್ಧನಿರಲಿಲ್ಲ. 2016ರಲ್ಲಿ ಜೆಸನ್ ಗೆಳತಿ ಮಗುವಿಗೆ ಜನ್ಮ ನೀಡಿದ್ದಳು. ಮಗು ತನ್ನದಲ್ಲ ಎಂಬ ಸಂಶಯ ವ್ಯಕ್ತಪಡಿಸಿದ್ದ ಜೆಸನ್ ಮದ್ಯದ ನಶೆಯಲ್ಲಿ ಬರೀ ಟೆವೆಲ್ ನಲ್ಲಿ ಗೆಳತಿಯನ್ನು ರಸ್ತೆಗಿಳಿಸಿದ್ದ. ನಂತ್ರ ಟೆವೆಲ್ ಎಳೆದು ಸಾರ್ವಜನಿಕರೆದುರು ಆಕೆ ಮಾನ ತೆಗೆದಿದ್ದ.

ಮುಂದಿನ ವಾರ ಜೆಸನ್ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಸುಮಾರು 7 ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...