alex Certify
ಕನ್ನಡ ದುನಿಯಾ       Mobile App
       

Kannada Duniya

ಲಂಡನ್ ನಲ್ಲಿ ಚೀಸ್ ಸ್ಯಾಂಡ್ವಿಚ್ ತಿಂದು ಬಾಲಕ ಸಾವು

boy

ಲಂಡನ್ ನಲ್ಲಿ ಚೀಸ್ ಸ್ಯಾಂಡ್ ವಿಚ್ ತಿಂದು ಭಾರತೀಯ ಮೂಲದ ಬಾಲಕ ಮೃತಪಟ್ಟಿದ್ದಾನೆ. 13 ವರ್ಷದ ಕರಣ್ ಬೀರ್ ಚೀಮಾಗೆ ಡೈರಿ ಉತ್ಪನ್ನಗಳನ್ನು ತಿಂದ್ರೆ ಅಲರ್ಜಿಯಾಗ್ತಾ ಇತ್ತು. ಆತನ ದೌರ್ಬಲ್ಯ ಅರಿತಿದ್ದ ಸಹಪಾಠಿಗಳು ರ್ಯಾಗಿಂಗ್ ಮಾಡಿದ್ದಾರೆ.

ಒತ್ತಾಯಪೂರ್ವಕವಾಗಿ ಬಾಲಕನಿಗೆ ಚೀಸ್ ಸ್ಯಾಂಡ್ ವಿಚ್ ತಿನಿಸಿದ್ದಾರೆ. ಅದನ್ನು ತಿಂದು ಸ್ವಲ್ಪ ಹೊತ್ತಿಗೆ ಕರಣ್ ಬೀರ್ ಅಸ್ವಸ್ಥನಾಗಿದ್ದ. ಕೂಡಲೇ ಅವನನ್ನು ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆಸ್ಪತ್ರೆಯಲ್ಲಿ 10 ದಿನಗಳ ಕಾಲ ಬಾಲಕನಿಗೆ ಚಿಕಿತ್ಸೆ ನೀಡಲಾಗಿದೆ, ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.

ಕಣ್ಣೆದುರಲ್ಲೇ ಮಗನ ಸಾವನ್ನು ಕಂಡ ಹೆತ್ತವರು ಆಘಾತಕ್ಕೊಳಗಾಗಿದ್ದಾರೆ. ಇ ಹೈಸ್ಕೂಲ್ ನಲ್ಲಿ ಕರಣ್ ಬೀರ್ ಓದ್ತಾ ಇದ್ದ. ಡೈರಿ ಉತ್ಪನ್ನಗಳಿಂದ ತನಗೆ ಅಲರ್ಜಿಯಾಗುತ್ತೆ ಅನ್ನೋದು ಅವನಿಗೂ ಗೊತ್ತಿತ್ತು. ಹಾಗಾಗಿ ಅವನ್ನೆಲ್ಲ ಅಪ್ಪಿತಪ್ಪಿಯೂ ತಿನ್ನುತ್ತಿರಲಿಲ್ಲ.

ಶಾಲೆಯ ಪುಂಡ ಹುಡುಗರು ಬಲವಂತವಾಗಿ ಚೀಸ್ ತಿನ್ನಿಸಿ ಮಗನನ್ನು ಕೊಂದಿದ್ದಾರೆ ಅಂತಾ ತಾಯಿ ಆರೋಪಿಸಿದ್ದಾರೆ. ಮೃತ ಬಾಲಕ ಅತ್ಯಂತ ಬುದ್ಧಿವಂತ ವಿದ್ಯಾರ್ಥಿಯಾಗಿದ್ದ. ಗಣಿತ ಮತ್ತು ಕಂಪ್ಯೂಟರ್ ಜ್ಞಾನ ಚೆನ್ನಾಗಿತ್ತು. ಹೆತ್ತವರಿಗೆ ಒಬ್ಬನೇ ಮಗ, ಕಂಪ್ಯೂಟರ್ ಎಂಜಿನಿಯರ್ ಆಗಬೇಕೆಂಬ ಕನಸು ಹೊತ್ತಿದ್ದ ಬಾಲಕ ಗೆಳೆಯರ ಕ್ರೌರ್ಯಕ್ಕೆ ಬಲಿಯಾಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...