alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ಬಾಲಕ ಮಾಡಿದ ವಾಂತಿ, ಪಾಲಕರಿಗೆ ತಂದಿಟ್ಟಿದೆ ಫಜೀತಿ

PARIS, FRANCE - MARCH 02: Model Alessandra Ambrosio, handbag detail, arrives at Charles-de-Gaulle airport on March 2, 2016 in Paris, France. (Photo by Marc Piasecki/GC Images)

ಮಕ್ಕಳನ್ನ ವಿಮಾನದಲ್ಲಿ ಕರೆದೊಯ್ಯೋದು ಅಂದ್ರೆ ತಂದೆ-ತಾಯಿಗೆ ಅಗ್ನಿಪರೀಕ್ಷೆ. 35,000 ಅಡಿ ಎತ್ತರದಲ್ಲಿ ಮಕ್ಕಳ ಆರೋಗ್ಯವೇನಾದ್ರೂ ಕೆಟ್ಟರೆ ದೇವರೇ ಗತಿ. ಅದರಲ್ಲೂ ವಾಂತಿ, ಬೇಧಿ ಶುರುವಾಗಿಬಿಟ್ರಂತೂ ಅಪ್ಪ-ಅಮ್ಮ ಕಂಗಾಲಾಗಿ ಹೋಗ್ತಾರೆ.

ಇಂಥದ್ದೇ ಘಟನೆ ವಿಮಾನವೊಂದ್ರಲ್ಲಿ ನಡೆದಿದೆ. ಪುಟ್ಟ ಬಾಲಕನೊಬ್ಬ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳ ಬ್ಯಾಗ್ ಮೇಲೆ ವಾಂತಿ ಮಾಡಿಬಿಟ್ಟಿದ್ದ. ತಾಯಿಗೆ ಮಗನ ಆರೋಗ್ಯವನ್ನು ಗಮನಿಸುವುದೋ ಅಥವಾ ವಾಂತಿ ಸ್ವಚ್ಛಗೊಳಿಸುವುದೋ ಅನ್ನೋ ಗೊಂದಲ.

ಆ ಮಹಿಳೆ, ಬ್ಯಾಗ್ ಮೇಲೆ ಬಿದ್ದಿದ್ದ ಗಲೀಜನ್ನೆಲ್ಲ ಕ್ಲೀನ್ ಮಾಡಿದ್ಲು, ಆದ್ರೆ ವಾಸನೆ ಹೋಗಿಲ್ಲ ಅನ್ನೋದು ಅವಳ ಅಳಲು. ಅಷ್ಟಕ್ಕೂ ಮಗು ವಾಂತಿ ಮಾಡಿದ್ದ ಬ್ಯಾಗ್ ಸಾಮಾನ್ಯದ್ದಲ್ಲ, ಲೂಯಿಸ್ ವ್ಯುಟ್ಟನ್ ಕಂಪನಿಯದ್ದು, ಅದರ ಬೆಲೆ ಎಷ್ಟು ಗೊತ್ತಾ? 900 ಪೌಂಡ್. ಅದನ್ನು ರಿಪೇರಿ ಮಾಡಲು ಸಾಧ್ಯವಿಲ್ಲ, ಹಾಗಾಗಿ ಬದಲಿಗೆ ಬೇರೆಯದನ್ನು ತಂದ್ಕೊಡಿ ಅನ್ನೋದು ಮಹಿಳೆಯ ಡಿಮ್ಯಾಂಡ್.

ನಮ್ಮ ಟ್ರಾವೆಲ್ ಇನ್ಷೂರೆನ್ಸ್ ಪಡೆದ್ರೂ ಅಷ್ಟು ಹಣ ಬರೋದಿಲ್ಲ, ಹೊಸ ಬ್ಯಾಗ್ ಎಲ್ಲಿಂದ ತರೋದು ಅನ್ನೋ ಆತಂಕ ಬಾಲಕನ ತಾಯಿಗೆ. ಅಷ್ಟು ದುಬಾರಿ ಬ್ಯಾಗ್ ಅಂದ್ಮೇಲೆ ಅದನ್ಯಾಕೆ ವಿಮಾನದ ಫ್ಲೋರ್ ಮೇಲಿಟ್ರಿ, ಲಾಕರ್ ನಲ್ಲಿ ಹಾಕಿಡಬಹುದಿತ್ತಲ್ಲ ಅಂತಾ ಆಕೆ ಸವಾಲು ಹಾಕಿದ್ರು. ಒಟ್ಟಿನಲ್ಲಿ ಪ್ರಯಾಣದ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ಹದಗೆಟ್ರೆ ತಂದೆ-ತಾಯಿಗೆ ಫಜೀತಿ ತಪ್ಪಿದ್ದಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...