alex Certify
ಕನ್ನಡ ದುನಿಯಾ       Mobile App
       

Kannada Duniya

ಒಡೆದ ಮೊಬೈಲ್‌ನಲ್ಲಿ ತೆಗೆದ ಆ ಫೋಟೋದಿಂದಾಗಿದೆ ದೊಡ್ಡ ಯಡವಟ್ಟು

ಮೊಬೈಲ್‌ ಫೋನ್‌ ಹಾಳಾದರೆ, ಒಬ್ಬ ವ್ಯಕ್ತಿಯ ಮಾನ ಮರ್ಯಾದೆ ಎಷ್ಟರ ಮಟ್ಟಿಗೆ ಹೋಗಬಹುದು ಎಂಬುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ ಇದೆ. ತರಗತಿಯ ಗ್ರೂಪ್‌ನಲ್ಲಿ ತನ್ನ ಗುಪ್ತಾಂಗದ ಫೋಟೋ ಅಪ್‌ಲೋಡ್‌ ಆಗಿದ್ದು ಹೇಗೆ ಎಂಬ ವಿಚಾರವನ್ನು ಹುಡುಗ ಟ್ವಿಟರ್‌ನಲ್ಲಿ ವಿವರಿಸಿದ್ದಾನೆ.

ಬಹುಷಃ ಯಾರಿಗೂ ಇಷ್ಟೊಂದು ನಾಚಿಕೆ ಹಾಗೂ ಮುಜುಗರ ಉಂಟು ಮಾಡಿದ ಸಂಗತಿ ಆಗಿರಲಿಕ್ಕಿಲ್ಲ. ಮೊಬೈಲ್‌ ಡಿಸ್ಪ್ಲೇ ಒಡೆದು ಹೋಗಿತ್ತು. ಹೊಸ ಫೋನ್ ಖರೀದಿಗೆ ಹಣ ಇರಲಿಲ್ಲ. ಫೋನ್‌ಗೆ ಇನ್ಶುರೆನ್ಸ್‌ ಸಹ ಇರಲಿಲ್ಲ. ಒಡೆದ ಫೋನ್‌ ಇಟ್ಟುಕೊಂಡಿದ್ದ ಒಬ್ಬ ಕಾಲೇಜು ವಿದ್ಯಾರ್ಥಿ ನಾನಾಗಿದ್ದೆ ಎಂದು ಟ್ವಿಟರ್‌ನಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾನೆ.

ಇದೇ ಒಡೆದ ಫೋನ್‌ನಲ್ಲಿ ಮಲಗುವ ವೇಳೆ ನನ್ನ ಗುಪ್ತಾಂಗದ ಫೋಟೋ ತೆಗೆದದ್ದು ನಿಜ ಎಂದು ಒಪ್ಪಿಕೊಂಡಿರುವ ಯುವಕ, ಫೋಟೋವನ್ನು ಎಲ್ಲೂ ಶೇರ್‌ ಮಾಡಿರಲಿಲ್ಲ. ಫೋಟೋ ತೆಗೆದು ಮಲಗಿದ ಆತ, ಬೆಳಗ್ಗೆ ಎದ್ದಾಗ ನನ್ನ ದಿನ ಅಷ್ಟೊಂದು ಕೆಟ್ಟದಾಗಿರುವುದಾಗಿ ಭಾವಿಸಿರಲಿಲ್ಲವಂತೆ. ರಾತ್ರಿ ತೆಗೆದಿದ್ದ ಫೋಟೋ ಅಚಾನಕ್‌ ಆಗಿ ಕಾಲೇಜಿನ ತರಗತಿಯ ಗ್ರೂಪ್‌ಗೆ ಶೇರ್‌ ಆಗಿ ಬಿಟ್ಟಿದೆ. ಬೆಳಗ್ಗೆ ಕಾಲೇಜ್‌ ಗ್ರೂಪ್‌ನಲ್ಲಿ ಮೆಸೇಜ್‌ಗಳ ಸರಮಾಲೆಯೇ ಇರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾನೆ. ಫೋಟೋ ತೆಗೆದ ಬಗ್ಗೆ ಮರೆತಿದ್ದ ಆತ, ಪರಿಶೀಲಿಸಿದಾಗ ಫೋಟೋ ಶೇರ್‌ ಆಗಿರುವುದು ಗೊತ್ತಾಗಿದೆ. ತೀರಾ ಮುಜುಗರಕ್ಕೂ ಒಳಗಾಗಿದ್ದ ಯುವಕ ಉದ್ಧೇಶಪೂರ್ವಕವಾಗಿ ಈ ಕೆಲಸ ಮಾಡಿಲ್ಲ ಎಂದು ಟ್ವಿಟರ್‌ನಲ್ಲಿ ವಿವರಣೆ ನೀಡಿದ್ದಾನೆ.

ತರಗತಿಯ ಅನೇಕ ಹುಡುಗರು ಈತನನ್ನು ತಮಾಷೆಯ ವಸ್ತುವನ್ನಾಗಿ ಕಂಡಿದ್ದಾರೆ. ಒಡೆದ ಫೋನ್‌ನಲ್ಲಿ ತೆಗೆದ ಒಂದು ಫೋಟೋ, ಹುಡುಗನನ್ನು ಈ ಮಟ್ಟಕ್ಕೆ ಅವಮಾನಿಸಿ, ಪೇಚಿಗೆ ಸಿಲುಕಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...