alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಬಾಲಕನ ದೇಹದಿಂದ ಹೊರ ಬರ್ತಿದೆ ಮೊಟ್ಟೆ

ಇಂಡೋನೇಷ್ಯಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. 14 ವರ್ಷದ ಹುಡುಗನೊಬ್ಬನ ದೇಹದಿಂದ ಮೊಟ್ಟೆ ಹೊರಬರ್ತಿದೆ. ಎರಡು ವರ್ಷಗಳಿಂದ ಅಂದ್ರೆ 2016ರಿಂದ ಈವರೆಗೆ ಹುಡುಗನ ದೇಹದಿಂದ 20 ಮೊಟ್ಟೆಗಳು ಹೊರ ಬಂದಿವೆ.

ಹುಡುಗ ಹಾಗೂ ಹುಡುಗನ ತಂದೆ ಈ ವಿಷ್ಯವನ್ನು ಹೇಳಿದ್ದಾರೆ. ವೈದ್ಯರ ಮುಂದೆಯೇ ಹುಡುಗನ ದೇಹದಿಂದ 2 ಮೊಟ್ಟೆ ಹೊರ ಬಂದಿದೆಯಂತೆ. ವಿಜ್ಞಾನಿಗಳು ಮಾತ್ರ ಇದು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಮೊಟ್ಟೆ ನೀಡುತ್ತಿರುವ ಹುಡುಗನ ಹೆಸರು ಅಕ್ಮಲ್. ಮೊದಲು ಅಕ್ಮಲ್ ನೀಡಿದ ಮೊಟ್ಟೆಯನ್ನು ತಂದೆ ಒಡೆದು ನೋಡಿದ್ದರಂತೆ. ಅದ್ರಲ್ಲಿ ಹಳದಿ ಭಾಗ ಮಾತ್ರವಿತ್ತಂತೆ. ಕೆಲವೊಮ್ಮೆ ಬಿಳಿ ಭಾಗ ಮಾತ್ರವಿರುತ್ತದೆ ಎನ್ನುತ್ತಾರೆ ಅಕ್ಮಲ್ ತಂದೆ.

ಎಕ್ಸರೇ ವೇಳೆ ಅಕ್ಮಲ್ ಹೊಟ್ಟೆಯಲ್ಲಿ ಮೊಟ್ಟೆ ಇರುವುದು ಕಾಣಿಸಿದೆ. ಇದು ವೈದ್ಯರನ್ನು ಚಿಂತೆಗೀಡು ಮಾಡಿದೆ. ಇದು ಹೇಗೆ ಸಾಧ್ಯ ಎಂಬ ಒಗಟು ಬಿಡಿಸುವ ಕಾರ್ಯ ಶುರು ಮಾಡಿದ್ದಾರೆ ವೈದ್ಯರು. ಅಕ್ಮಲ್ ಗುದದ್ವಾರದ ಮೂಲಕ ಮೊಟ್ಟೆಯನ್ನು ಒಳಗೆ ಹಾಕಿ ನಂತ್ರ ಹೊರ ಹಾಕುತ್ತಿದ್ದಾನೆಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಅಕ್ಮಲ್ ತಂದೆ, ಮಗ ಮೋಸ ಮಾಡ್ತಿಲ್ಲ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...