alex Certify
ಕನ್ನಡ ದುನಿಯಾ       Mobile App
       

Kannada Duniya

ಸಿರಿಯಾ ಭೀಕರತೆಗೆ ಸಾಕ್ಷಿಯಾದ ಪುಟ್ಟ ಬಾಲಕ

unnamedನಿರಂತರ ಬಾಂಬ್ ದಾಳಿಯಿಂದ ನಲುಗಿರುವ ಸಿರಿಯಾದ ಅಲೆಪ್ಪೋ ನಗರದಲ್ಲಿ ಅವಶೇಷಗಳಡಿಯಿಂದ ಪುಟ್ಟ ಬಾಲಕನೊಬ್ಬನನ್ನು ರಕ್ಷಿಸಲಾಗಿದೆ. ರಷ್ಯಾ ನಡೆಸಿದ ವಾಯುದಾಳಿಯಲ್ಲಿ ಅಲೆಪ್ಪೋ ನಗರ ಸಂಪೂರ್ಣ ಛಿದ್ರವಾಗಿದೆ.

ಕಲ್ಲು ಮಣ್ಣುಗಳ ರಾಶಿಯಲ್ಲಿ ಸಿಲುಕಿಕೊಂಡಿದ್ದ ಬಾಲಕನನ್ನು ವ್ಯಕ್ತಿಯೊಬ್ಬ ರಕ್ಷಿಸಿ ಕರೆತಂದು ಕುರ್ಚಿಯೊಂದರಲ್ಲಿ ಕೂರಿಸಿ ಅಲ್ಲಿಂದ ತೆರಳಿದ್ದಾನೆ. ಪುಟ್ಟ ಬಾಲಕನ ಮೈತುಂಬಾ ಧೂಳು ಮೆತ್ತಿಕೊಂಡಿತ್ತು. ಎಲ್ಲಿ ನೋಡಿದ್ರೂ ಗಾಯಗಳ ರಾಶಿ. ತಲೆಯಿಂದ ರಕ್ತ ಸುರಿಯುತ್ತಿತ್ತು. ಅದನ್ನು ತನ್ನ ಪುಟ್ಟ ಕೈಗಳಿಂದ ಒರೆಸಿಕೊಳ್ಳುತ್ತಿದ್ದ ಬಾಲಕನ ಸ್ಥಿತಿ ಅಕ್ಷರಶಃ ಕರುಣಾಜನಕವಾಗಿತ್ತು. ಈ ದೃಶ್ಯ ಈಗಾಗ್ಲೇ ಇಂಟರ್ನೆಟ್ ನಲ್ಲಿ ಹರಿದಾಡುತ್ತಿದ್ದು, ಸಿರಿಯಾದಲ್ಲಿ ನಡೆಯುತ್ತಿರುವ ಸಂಘರ್ಷದ ಭೀಕರತೆಗೆ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ.

ಕಳೆದ 1 ವರ್ಷದಲ್ಲಿ ಸಿರಿಯಾದಲ್ಲಿ ಸುಮಾರು 250,000 ಮಂದಿ ದಂಗೆಗೆ ಬಲಿಯಾಗಿದ್ದಾರೆ. ಮಿಲಿಯನ್ ಗಟ್ಟಲೆ ಜನ ಮನೆಮಠ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಅಧ್ಯಕ್ಷ ಬಶರ್ ಅಲ್ ಅಸದ್ ಹಾಗೂ ಬಂಡುಕೋರರ ನಡುವಣ ಸಂಘರ್ಷಕ್ಕೆ ಅಲೆಪ್ಪೋ ನಗರವೇ ವೇದಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...