alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಕೈಗೆ ಕತ್ತರಿ ಕೊಟ್ಟರೆ ಆಗಬಹುದು ಇಂಥಾ ಅನಾಹುತ

ಕೆಲವೊಂದು ವಸ್ತುಗಳನ್ನು ಅಪ್ಪಿತಪ್ಪಿಯೂ ಮಕ್ಕಳ ಕೈಗೆ ಕೊಡಲೇಬಾರದು. ಅದರಲ್ಲೂ ಕತ್ತರಿ, ಚಾಕುವನ್ನ ಮಕ್ಕಳ ಕೈಗೆ ಸಿಗುವಂತೆ ಇಡಬೇಡಿ. ಯಾಕಂದ್ರೆ ಚೀನಾದಲ್ಲಿ 2 ವರ್ಷದ ಬಾಲಕನೊಬ್ಬ ಕತ್ತರಿ ತೆಗೆದುಕೊಂಡು ಅನಾಹುತ ಮಾಡಿಕೊಂಡಿದ್ದಾನೆ.

ಕತ್ತರಿ ತೆಗೆದುಕೊಂಡು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಅದು ಮಗುವಿನ ಮುಖಕ್ಕೆ ಚುಚ್ಚಿಕೊಂಡಿದೆ. ಕತ್ತರಿ ಬಲಗೆನ್ನೆಯ ಸುಮಾರು 2.3 ಇಂಚು ಆಳಕ್ಕೆ ಚುಚ್ಚಿಕೊಂಡಿತ್ತು. ಅದೃಷ್ಟವಶಾತ್ ಕಣ್ಣಿಗೆ ಯಾವುದೇ ಅಪಾಯವಾಗಿಲ್ಲ. ವೈದ್ಯರು ಕತ್ತರಿಯನ್ನು ಹೊರತೆಗೆದು ಗಾಯಕ್ಕೆ ಹೊಲಿಗೆ ಹಾಕಿದ್ದಾರೆ.

ಮಗು ಕತ್ತರಿಯ ಸುತ್ತ ಕುಣಿಯುತ್ತ ಓಡಾಡುತ್ತಿತ್ತು. ಕಾಲಿಗೆ ತಗುಲಿ ಕತ್ತರಿ ಮೇಲಕ್ಕೆ ಎಗರಿದೆ. ಆಗ ಕೆನ್ನೆಗೆ ಬಲವಾಗಿ ಚುಚ್ಚಿಕೊಂಡಿದೆ. ಮಗು ಕತ್ತರಿ ತೆಗೆದುಕೊಂಡು ಆಟವಾಡ್ತಿರೋದನ್ನು ತಾಯಿ ಗಮನಿಸಿರಲೇ ಇಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...